Asianet Suvarna News Asianet Suvarna News

PKL7: ಗುಜರಾತ್ ವಿರುದ್ಧ ಪುಣೇರಿ ತಂಡಕ್ಕೆ ರೋಚಕ ಗೆಲುವು!

ಮೊದಲಾರ್ಧದಲ್ಲಿ ಮುನ್ನಡೆ ಪಡೆದಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್, ಸೆಕೆಂಡ್ ಹಾಫ್‌ನಲ್ಲಿ ಪುಣೇರಿ ತಂಡ ಆರ್ಭಟಿಸೋ ಮೂಲಕ ಗೆಲುವಿನ ನಗೆ ಬೀರಿದೆ. ಗುಜರಾತ್ ತಂಡಕ್ಕೆ ಶಾಕ್ ನೀಡಿದ ಪುಣೇರಿ, ರೋಚಕ ಗೆಲುವು ಸಾಧಿಸಿದೆ.

Pro kabaddi 2019 Puneri Paltan Beat Gujarat Fortunegiants by 33-31 points
Author
Bengaluru, First Published Aug 5, 2019, 10:21 PM IST

ಪಾಟಲೀಪುತ್ರ(ಆ.05): ಪವನ್, ಅಮಿತ್ ಕುಮಾರ್ ಹಾಗೂ ಗಿರೀಶ್ ಮಾರುತಿ ಅದ್ಭುತ ಪ್ರದರ್ಶನದಿಂದ  ಪ್ರೊ ಕಬಡ್ಡಿ ಲೀಗ್ ಟೂರ್ನಿಯ 28ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ರೋಚಕ ಗೆಲುವು ಸಾಧಿಸಿದೆ. ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ ಹೋರಾಡಿದ ಪುಣೇರಿ 33-31 ಅಂಕಗಳ ಗೆಲುವು ಸಾಧಿಸಿದೆ. ಈ ಮೂಲಕ ಸೋತು ಕಂಗಾಲಾಗಿದ್ದ ಪುಣೆ ಇದೀಗ 2 ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಮೊದಲ ನಿಮಿಷದಲ್ಲಿ ಉಭಯ ತಂಡಗಳು ಅಂಕಗಳಿಸಲಿಲ್ಲ.  ಗಿರೀಶ್ ಮಾರುತಿ ಟ್ಯಾಕಲ್ ಮೂಲಕ ಮೂಲಕ ಪುಣೇರಿ 1-0 ಮುನ್ನಡೆ ಪಡೆದುಕೊಂಡಿತು. 5ನೇ ನಿಮಿಷದಲ್ಲಿ ಗುಜರಾತ್ 5-5 ಅಂಕಗಳಿಂದ ಸಮಬಲ ಮಾಡಿಕೊಂಡಿತು. ದಿಟ್ಟ ಹೋರಾಟ ನೀಡಿದ ಗುಜರಾತ್ ಮೊದಲಾರ್ಧದ ಅಂತ್ಯದಲ್ಲಿ 17-14 ಅಂಕಗಳ ಮುನ್ನಡೆ ಸಾಧಿಸಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ದ್ವಿತಿಯಾರ್ಧದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಪುಣೇರಿ 20-18 ಅಂಕಗಳ ಮುನ್ನಡೆ ಪಡೆದುಕೊಂಡಿತು. ಇದು ಪಂದ್ಯಕ್ಕೆ ತಿರುವು ನೀಡಿತು. ಬಳಿಕ ಗುಜರಾತ್ ತಂಡಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ದ್ವಿತಿಯಾರ್ಧದ ಅಂತ್ಯದಲ್ಲಿ ಪುಣೇರಿ 33-31 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. 
 

Follow Us:
Download App:
  • android
  • ios