ಕೋಲ್ಕ​ತಾ(ಸೆ.10): ಪ್ರೊ ಕಬ​ಡ್ಡಿ​ಯಲ್ಲಿ ಇತಿ​ಹಾಸದಲ್ಲೇ 1000 ಅಂಕಗಳ ಮೈಲಿ​ಗಲ್ಲು ತಲು​ಪಿದ ಮೊದಲ ಆಟ​ಗಾರ ಎನ್ನುವ ದಾಖಲೆಯನ್ನು ಪಾಟ್ನಾ ಪೈರೇಟ್ಸ್‌ನ ರೈಡ್‌ ಮಷಿನ್‌ ಪ್ರದೀಪ್‌ ನರ್ವಾಲ್‌ ಬರೆ​ದಿ​ದ್ದಾರೆ. 7ನೇ ಆವೃ​ತ್ತಿಯಲ್ಲಿ ಪಾಟ್ನಾ ತಂಡ ಮಂಕಾ​ಗಿ​ದ್ದರೂ, ಪ್ರದೀಪ್‌ ಅತ್ಯು​ತ್ತಮ ಲಯ ಕಾಯ್ದು​ಕೊಂಡಿ​ದ್ದಾರೆ. ಸೋಮ​ವಾರ ಇಲ್ಲಿ ನಡೆದ ತಮಿಳ್‌ ತಲೈ​ವಾಸ್‌ ವಿರು​ದ್ಧದ ಪಂದ್ಯ​ದಲ್ಲಿ 26 ಅಂಕ ಗಳಿ​ಸಿದ ಪ್ರದೀಪ್‌, 1000 ಅಂಕಗಳ ಸಾಧನೆ ಮಾಡಿ​ದರು.

ಇದನ್ನೂ ಓದಿ: ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!

99 ಪಂದ್ಯ​ಗ​ಳನ್ನು ಆಡಿ​ರುವ ಪ್ರದೀಪ್‌ ರೈಡಿಂಗ್‌ನಲ್ಲಿ 1016 ಅಂಕ​ಗ​ಳಿ​ಸಿದ್ದಾರೆ. ಅವರು 7 ಟ್ಯಾಕಲ್‌ ಅಂಕ​ಗ​ಳನ್ನೂ ಪಡೆ​ದಿದ್ದು ಲೀಗ್‌ನಲ್ಲಿ ಒಟ್ಟು 1023 ಅಂಕ ಗಳಿ​ಸಿ​ದ್ದಾರೆ. ರೈಡಿಂಗ್‌ನಲ್ಲಿ​ರುವ ಬಹು​ತೇಕ ಎಲ್ಲಾ ದಾಖಲೆಗಳು ಪ್ರದೀಪ್‌ ಹೆಸ​ರಿ​ನ​ಲ್ಲಿವೆ. ಅತಿ​ಹೆಚ್ಚು ಅಂಕ, ಅತಿ​ಹೆಚ್ಚು ರೈಡ್‌ ಅಂಕ, ಅತಿಹೆಚ್ಚು ಯಶಸ್ವಿ ರೈಡ್‌ (765), ಸೂಪರ್‌ ರೈಡ್‌ (43) ಹಾಗೂ ಸೂಪರ್‌ ಟೆನ್‌ (52) ಪಟ್ಟಿಯಲ್ಲಿ ಪ್ರದೀಪ್‌ ಮೊದಲ ಸ್ಥಾನ​ದ​ಲ್ಲಿ​ದ್ದಾರೆ.

ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...

ಪ್ರೊ ಕಬ​ಡ್ಡಿ​ಯಲ್ಲಿ ಗರಿಷ್ಠ ಅಂಕ
(ರೈಡ್‌+ಟ್ಯಾ​ಕಲ್‌)

ಪ್ರದೀಪ್‌ ನರ್ವಾ​ಲ್‌ =1023(ಪಂದ್ಯ 99) 
ರಾಹುಲ್‌ ಚೌಧ​ರಿ=974(ಪಂದ್ಯ 115)
ದೀಪಕ್‌ ಹೂಡಾ =873(ಪಂದ್ಯ116) 
ಅಜಯ್‌ ಠಾಕೂ​ರ್‌ =811(ಪಂದ್ಯ115) 
ರೋಹಿತ್‌ ಕುಮಾ​ರ್‌=687(ಪಂದ್ಯ 87) 

ಪಾಟ್ನಾ, ಯೋಧಾಗೆ ಜಯ
ಕೋ​ಲ್ಕ​ತಾ: ಸೋಮ​ವಾರ ನಡೆದ ಪ್ರೊ ಕಬಡ್ಡಿ ಪಂದ್ಯ​ಗ​ಳಲ್ಲಿ ಪಾಟ್ನಾ ಹಾಗೂ ಯು.ಪಿ.​ಯೋಧಾ ತಂಡ​ಗಳು ಜಯ ಸಾಧಿ​ಸಿ​ದವು. ಪ್ರದೀಪ್‌ ನರ್ವಾಲ್‌ 26 ಅಂಕ​ಗಳ ಅಬ್ಬರದ ನೆರ​ವಿ​ನಿಂದ ಪಾಟ್ನಾ, ತಮಿಳ್‌ ತಲೈ​ವಾಸ್‌ ವಿರುದ್ಧ 51-25ರಲ್ಲಿ ಗೆಲುವು ಸಾಧಿ​ಸಿತು. ಸತತ 6 ಸೋಲು​ಗಳ ಬಳಿಕ ಪಾಟ್ನಾ ಗೆಲು​ವಿನ ಸಂಭ್ರಮ ಆಚ​ರಿ​ಸಿತು. ತಲೈ​ವಾಸ್‌ಗಿದು ಸತತ 7ನೇ ಸೋಲು. ಮೊದಲ ಪಂದ್ಯ​ದಲ್ಲಿ ಯೋಧಾ ತಂಡ ಗುಜ​ರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ 33-26ರಲ್ಲಿ ಜಯಿ​ಸಿತು. ಸತತ 4 ಜಯ ಸಾಧಿ​ಸಿದ ಯೋಧಾ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿತು.