PKL 2019: ಜೈಪುರ ವಿರುದ್ದ ಮುಗ್ಗರಿಸಿದ ಬೆಂಗಳೂರು ಬುಲ್ಸ್!

ಜೈಪುರ ಪಿಂಕ್‌ಪ್ಯಾಂಥರ್ಸ್ ವಿರುದ್ದದ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲಿದೆ. ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್‌ಪ್ಯಾಂಥರ್ಸ್ ನಡುವಿನ ಹೋರಾಟದ ಹೈಲೈಟ್ಸ್ ಇಲ್ಲಿದೆ.

Pro kabaddi 2019 Jaipur Pink Panthers Beat Bengaluru Bulls by 41-34 points

ಪಂಚಕುಲ(ಅ.04): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಬೆಂಗಳೂರು ಬುಲ್ಸ್ ಇದೀಗ ಪಟ್ಟು ಸಡಿಲಗೊಳಿಸಿದೆ. ಜೈಪುರ್‌ ಪಿಂಕ್‌ಪ್ಯಾಂಥರ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಬೆಂಗಳೂರು 34-41 ಅಂತಗಳ ಅಂತರದಲ್ಲಿ ಸೋಲು ಕಂಡಿತು. 

ಇದನ್ನೂ ಓದಿ: ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!

ಪಂದ್ಯದ ಆರಂಭದಿಂದಲೇ ಬೆಂಗಳೂರು ಬುಲ್ಸ್ ಮಂಕಾಗಿತ್ತು. ದೀಪಕ್ ನರ್ವಾಲ್ ರೈಡ್ ಮೂಲಕ ಜೈಪುರ ಮೊದಲ ಅಂಕ ಬಾಚಿಕೊಂಡಿತು. ಬೆಂಗಳೂರು ತಂಡದ ಸ್ಟಾರ್ ರೈಡರ್ ಪವನ್ ಶೆರಾವತ್ ಕೂಡ ಅಂಕ ತರಲಿಲ್ಲ. ಆದರೆ ಸುಮಿತಿ ಸಿಂಗ್ ರೈಡ್ ಮೂಲಕ ಬೆಂಗಳೂರು ಅಂಕ ಖಾತೆ ತೆರೆಯಿತು. ಆದರೂ ಜೈಪುರ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಟೈಟಾನ್ಸ್

ನೀಲೇಶ್ ಸಾಲುಂಕೆ ಸೂಪರ್ ರೈಡ್ ಮೂಲಕ ಜೈಪುರ 8-4 ಅಂಕಗಳ ಮುನ್ನಡೆ ಪಡೆಯಿತು. 10ನ ನಿಮಿಷದಲ್ಲಿ ಪವನ್ ಶೆರಾವತ್ ಸೂಪರ್ ರೈಡ್ ಮೂಲಕ 11-10 ಅಂಕಗಳಿಂದ ಜೈಪುರ ತಂಡವನ್ನು ಹಿಂದಿಕ್ಕಿತು. ಬೆಂಗಳೂರು ತಂಡದ ಸಂತಸ ಹೆಚ್ಚು ಹೊತ್ತು ಇರಲಿಲ್ಲ. ಅಷ್ಟೇ ವೇಗದಲ್ಲಿ ಜೈಪರು ಮುನ್ನಡೆ ಪಡೆದುಕೊಂಡಿತು.

ಮೊದಲಾರ್ಧಲ್ಲಿ ಜೈಪುರ 20-18 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲಿ ಚುರುಕಿನ ಹೋರಾಟ ನೀಡಿದ ಬೆಂಗಳೂರು 5ನೇ ನಿಮಿಷದಲ್ಲಿ ಜೈಪುರ ತಂಡವನ್ನು ಆಲೌಟ್ ಮಾಡಿ 26-25 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. ಪಂದ್ಯದ 16ನೇ ನಿಮಿಷದ ವರೆಗೂ ಬುಲ್ಸ್ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ 17ನೇ ನಿಮಿದಲ್ಲಿ ಜೈಪುರ 34-34 ಅಂಕ ಸಂಪಾದಿಸಿತು. ಅಂತಿಮ ಹಂತದಲ್ಲಿ ಗೇರ್ ಬದಲಾಯಿಸಿದ ಜೈಪುರ 41-34 ಅಂತರದಲ್ಲಿ ಗೆಲುವು ಸಾಧಿಸಿತು.
 

Latest Videos
Follow Us:
Download App:
  • android
  • ios