Asianet Suvarna News Asianet Suvarna News

PKL7: ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ದಿಲ್ಲಿ ಕುಣಿತ!

ಪ್ರೊ ಕಬಡ್ಡಿ ಟೂರ್ನಿಯಲ್ಲಿ ತವರಿನ ತೆಲುಗು ಟೈಟಾನ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಒಂದು ಹಂತದಲ್ಲಿ ಮೆಲುಗೈ ಸಾಧಿಸಿದರೆ, ಮರುಕ್ಷಣದಲ್ಲಿ ದಬಾಂಗ್ ದಿಲ್ಲಿ ತಿರುಗೇಟು ನೀಡುತ್ತಿತ್ತು. ಈ ರೋಚಕ ಹೋರಾಟದಲ್ಲಿ ದಿಲ್ಲಿ 1 ಅಂಕಗಳ ರೋಚಕ ಗೆಲುವು ಸಾಧಿಸಿತು.

Pro kabaddi 2019 Dabang Delhi K C  Beat Telugu Titans in thrilling match at Hyderabad
Author
Bengaluru, First Published Jul 24, 2019, 10:02 PM IST
  • Facebook
  • Twitter
  • Whatsapp

ಹೈದರಾಬಾದ್(ಜು.24): ತೆಲುಗು ಟೈಟಾನ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪ್ರೋ ಕಬಡ್ಡಿ ಲೀಗ್ ಹೋರಾಟದಲ್ಲಿ ಗೆಲುವು ಯಾರಿಗೆ ಅನ್ನೋದು ಅಂತಿಮ ನಿಮಿಷದವರೆಗೂ ಕುತೂಹಲ ಕೆರಳಿಸಿತ್ತು. ಕ್ಷಣಕ್ಷಣಕ್ಕೂ ಪಂದ್ಯ ರೋಚಕ ಘಟ್ಟದತ್ತ ಸಾಗಿಸಿತ್ತು. ಆರಂಭದಲ್ಲಿ ದಬಾಂಗ್ ದಿಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅಂತಿಮ ಕ್ಷಣದಲ್ಲಿ ತವರಿನ ತೆಲುಗು ತಂಡ ತಿರುಗೇಟು ನೀಡಿತು.  ಇನ್ನೇನು ಪಂದ್ಯ ಮುಕ್ತಾಯದ ವೇಳೆ 1 ಅಂಕದ ಮುನ್ನಡೆಯೊಂದಿಗೆ ದಿಲ್ಲಿ ಗೆಲುವಿನ ಗೆರೆ ದಾಟಿತು. ರೋಚಕ ಹೋರಾಟದಲ್ಲಿ ದಬಾಂಗ್ ದಿಲ್ಲಿ 34-33 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !

ವೃತ್ತಿಪರ ಕಬಡ್ಡಿ ಪಟುಗಳ ಲೀಗ್ ಟೂರ್ನಿ ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಿದೆ. ಗಚ್ಚಿಬೊಲಿ ಕ್ರೀಡಾಂಗಣದಲ್ಲಿ ನಡೆದ ತೆಲುಗು ಟೈಟಾನ್ಸ್ ಹಾಗೂ ದಬಾಂಗ್ ದಿಲ್ಲಿ ಪಂದ್ಯವೂ ಇದಕ್ಕೆ ಹೊರತಾಗಿರ್ಲಿಲ್ಲ. ಫಸ್ಟ್ ಹಾಫ್ ಆರಂಭದಲ್ಲಿ ತೆಲುಗು 2 ಅಂಕದೊಂದಿಗೆ ಅಕೌಂಟ್ ಒಪನ್ ಮಾಡಿತು. ಆದರೆ 2ನೇ ನಿಮಿಷಕ್ಕೆ ದಿಲ್ಲಿ ತಿರುಗೇಟು ನೀಡಿ 3-2 ಅಂತರದಲ್ಲಿ ಮುನ್ನಡೆ ಪಡೆಯಿತು.

ಇದನ್ನೂ ಓದಿ:  ಪ್ರೊ ಕಬಡ್ಡಿ 7ನೇ ಆವೃತ್ತಿ ವಿಶೇಷತೆ!

ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿತು. ಫಸ್ಟ್ ಹಾಫ್ ಅಂತ್ಯದಲ್ಲಿ ದಬಾಂಗ್ ದಿಲ್ಲಿ 13-12 ಅಂಕಗಳ ಮುನ್ನಡೆ ಪಡೆದುಕೊಂಡಿತು. ಇನ್ನು ದ್ವಿತಿಯಾರ್ಧದಲ್ಲೂ ಗೆಲುವುಗಾಗಿ ಎರಡು ತಂಡ ಕಠಿಣ ಪ್ರಯತ್ನ ನಡೆಸಿತು. ಅಂತಿಮ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡ ಡೆಲ್ಲಿ ಮೇಲೆ ಸವಾರಿ ಮಾಡಿದ ತೆಲುಗು  ಸಮಬಗೊಳಿಸಿತು. ಆದರೆ ಪಂದ್ಯದ ಸಮಯ ಮುಕ್ತಾಯಗೊಳ್ಳುವಷ್ಟರಲ್ಲಿ ದಬಾಂಗ್ ದಿಲ್ಲಿ 1 ಅಂಕ ಮುನ್ನಡೆ ಪಡೆದು ರೋಚಕ ಗೆಲವು ಸಾಧಿಸಿತು. ತೆಲುಗು ಟೈಟಾನ್ಸ್ ವಿರೋಚಿತ ಸೋಲು ತವರಿನ ಅಭಿಮಾನಿಗಳಿಗೆ ನಿರಾಸೆ ತಂದಿತು.

Follow Us:
Download App:
  • android
  • ios