PKL 2019: ಬೆಂಗಾಲ್ ವಾರಿಯರ್ಸ್ ಘರ್ಜನೆಗೆ ಯು ಮುಂಬಾ ಶರಣು!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಅಬ್ಬರ ಮುಂದುವರಿದಿದೆ. 8ನೇ ಗೆಲುವಿನ ಮೂಲಕ 2ನೇ ಸ್ಥಾನ ಸಂಪಾದಿಸಿರುವ ಬೆಂಗಾಲ್, ಇದೀಗ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಬೆಂಗಾಲ್ ಹಾಗೂ ಯು ಮುಂಬಾ ನಡೆವಿನ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಕೋಲ್ಕತಾ(ಸೆ.11): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಗೆಲುವಿನ ಓಟ ಮುಂದುವರಿಸಿದೆ. ಯು ಮುಂಬಾ ವಿರುದ್ದದ 85ನೇ ಲೀಗ್ ಪಂದ್ಯದಲ್ಲಿ ಬೆಂಗಾಲ್ 29-26 ಅಂಕಗಳಿಂದ ಗೆಲುವು ಸಾಧಿಸಿತು. ಈ ಮೂಲಕ 15 ಪಂದ್ಯಗಳಲ್ಲಿ 8 ಗೆಲುವು, 4 ಸೋಲು ಹಾಗೂ 3 ಟೈ ಪಂದ್ಯಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ.
ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...
ಮೊದಲಾರ್ಧದಲ್ಲಿ ಮುಂಬೈ ಆರಂಭ ಉತ್ತಮವಾಗಿತ್ತು. ಅರ್ಜುನ್ ದೇಸ್ವಾಲ್ ಅವರ ಸೂಪರ್ ರೈಡ್ ಹಾಗೂ ಬೋನಸ್ ಪಾಯಿಂಟ್ ಮೂಲಕ ಮುಂಬೈ 3-0 ಅಂತರದ ಮುನ್ನಡೆ ಪಡೆದುಕೊಂಡಿತು. ಆರಂಭಿಕ 2 ನಿಮಿಷದ ಬಳಿಕ ಬೆಂಗಾಲ್ ಅಂಕ ಖಾತೆ ತೆರೆಯಿತು. 5ನೇ ನಿಮಿಷದಲ್ಲಿ ಬೆಂಗಾಲ್ 4-4 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಅಷ್ಟರಲ್ಲೇ ಮುಂಬೈ ಮಂಕಾಯಿತು.
ಇದನ್ನೂ ಓದಿ: ಸುವರ್ಣನ್ಯೂಸ್.ಕಾಂ ಜೊತೆ ಬೆಂಗಳೂರು ಬುಲ್ಸ್ ನಾಯಕನ Exclusive ಮಾತು!
ಆರಂಭ ಶೂರತ್ವ ತೋರಿದ ಯು ಮುಂಬಾ ಮತ್ತೆ ಅಬ್ಬರಿಸಲಿಲ್ಲ. ಆದರೆ ಸಿಕ್ಕ ಅವಕಾಶವನ್ನು ಬಳಿಸಿಕೊಂಡ ಬೆಂಗಾಲ್ ವಾರಿಯರ್ಸ್ 16-13 ಅಂಕಗಳ ಮುನ್ನಡೆಯೊಂದಿಗೆ ಮೊದಲಾರ್ಧ ಅಂತ್ಯಗೊಳಿಸಿತು. ದ್ವಿತಿಯಾರ್ಧದಲ್ಲಿ ಯು ಮುಂಬಾ ಮುನ್ನಡೆಗಾಗಿ ಹೋರಾಟ ನಡೆಸಿದರೂ ಕೈಗೂಡಲಿಲ್ಲ. ಅಂತಿಮವಾಗಿ ಬೆಂಗಾಲ್ 29-26 ಅಂಕಗಳಿಂದ ಗೆಲುವು ಸಾದಿಸಿತು.
ಹರ್ಯಾಣ vs ಜೈಪುರ ಪಂದ್ಯ ಟೈ:
ಪ್ರೊ ಕಬಡ್ಡಿ ಲೀಗ್ ಟೂರ್ನಿಯ 84ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಹಾಗೂ ಜೈಪುರು ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಿತ್ತು. ರೋಚಕ ಪಂದ್ಯ 32-32 ಅಂಕಗಳಿಂದ ಟೈನಲ್ಲಿ ಅಂತ್ಯವಾಯಿತು. ಮೊದಲಾರ್ಧದ ಅಂತ್ಯದಲ್ಲಿ ಹರ್ಯಾಣ 18-14 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಆದರೆ ಸೆಕೆಂಡ್ ಹಾಫ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಜೈಪುರ ತಿರುಗೇಟು ನೀಡಿತು. ರೋಚಕ ಹೋರಾಟದಲ್ಲಿ ಜೈಪುರ ಹಾಗೂ ಹರ್ಯಾಣ 32-32 ಅಂಕಳಿಂದ ಟೈನಲ್ಲಿ ಅಂತ್ಯವಾಯಿತು.