PKL 2019: ಬೆಂಗಾಲ್ ಹೊಡೆತಕ್ಕೆ ಪಲ್ಟಿಯಾದ ತಮಿಳ್ ತಲೈವಾಸ್!

ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಹಲವು ಏರಿಳಿತ ಕಂಡಿತ್ತು. ಆರಂಭಿಕ ಹಂತದಲ್ಲಿ ತಮಿಳ್ ತಲೈವಾಸ್ ಮುನ್ನಡೆ ಪಡೆದಿದ್ದರೆ, ಬಳಿಕ ಬೆಂಗಾಲ್ ಅಬ್ಬರಿಸಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Pro kabaddi 2019 Bengal Warriors Beat Tamil Thalaivas by 35-26 points

ದೆಹಲಿ(ಆ.29): ತಮಿಳ್ ತಲೈವಾಸ್ ವಿರುದ್ದ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 35-26 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಾಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ. ಬೆಂಗಾಲ್ ಆಡಿದ 11 ಪಂದ್ಯದಲ್ಲಿ 6 ಗೆಲುವು ಹಾಗೂ 3 ಸೋಲು ಕಂಡಿದೆ. ಇತ್ತ ತಮಿಳ್ ತಲೈವಾಸ್ ಕೇವಲ 3 ಗೆಲುವಿನೊಂದಿಗೆ 11ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಅಜೀತ್ ಟ್ಯಾಕಲ್ ಹಾಗೂ ಅಜಯ್ ಠಾಕೂರ್ ರೈಡ್‌ನಿಂದ ತಮಿಳ್ ತಲೈವಾಸ್ ಭರ್ಜರಿಯಾಗಿ ಪಂದ್ಯ ಆರಂಭಿಸಿತು. ಆರಂಭಿಕ 7 ನಿಮಿಷದ ವರೆದೆ ತಮಿಳ್ ತಲೈವಾಸ್ ಮುನ್ನಡೆ ಕಾಯ್ದುಕೊಂಡಿತ್ತು. 5-3ರ ಮುನ್ನಡೆಯಲ್ಲಿದ್ದ ತಮಿಳ್ ತಂಡಕ್ಕೆ ಬೆಂಗಾಲ್ ಶಾಕ್ ನೀಡಿತು. 8ನೇ ನಿಮಿಷದಲ್ಲಿ ಬೆಂಗಾಲ್ 5-5 ಅಂಕಗಳೊಂದಿಗೆ ಸಮಬಲ ಮಾಡಿಕೊಂಡಿತು. ತಮಿಳ್ ತಲೈವಾಸ್ ಹಿಂದಿಕ್ಕಿದ ಬೆಂಗಾಲ್ ಮುನ್ನಡೆ ಅಂತರ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಮೊದಲಾರ್ಧದ ಅಂತ್ಯದಲ್ಲಿ ಬೆಂಗಾಲ್ ವಾರಿಯರ್ಸ್ 15-14 ಅಂಕ ಪಡೆಯಿತು. ಈ ಮೂಲಕ 1 ಅಂಕಗಳಿಂದ ಮುನ್ನಡೆ ಪಡೆದಿಕೊಂಡಿತು. ದ್ವಿತಿಯಾರ್ಧದಲ್ಲಿ ಮುನ್ನಡೆಗಾಗಿ ತಮಿಳ್ ಹಲವು ಪ್ರಯತ್ನ ನಡೆಸಿತು. ಆದರೆ ಪ್ರಯೋಜನವಾಗಲಿಲ್ಲ. ಸೆಕೆಂಡ್ ಹಾಫ್‌ನ 15ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ಆಲೌಟ್‌ಗೆ ತುತ್ತಾಯಿತು. ಈ ಮೂಲಕ ಬೆಂಗಾಲ್ 29-21 ಅಂಕ ಸಂಪಾದಿಸಿತು. ಅಂತಿಮ ಕ್ಷಣದ  ವರೆಗೆ ಹೋರಾಡಿದ ತಮಿಳ್ ತಲೈವಾಸ್‌ಗೆ ಗೆಲುವು ಸಿಗಲಿಲ್ಲ. ದಿತಿಯಾರ್ಧದ ಅಂತ್ಯದಲ್ಲಿ ಬೆಂಗಾಲ್ 35-26 ಅಂಕ ಪಡೆದು ಗೆಲುವು ಸಾಧಿಸಿತು.
 

Latest Videos
Follow Us:
Download App:
  • android
  • ios