ಯುವ ತಾರಾ ರೈಡರ್ ಸಿದ್ಧಾರ್ಥ್ ದೇಸಾಯಿ(17 ಅಂಕ) ಅದ್ಭುತ ಹೋರಾಟ, ತಂಡದ ಸಂಘಟನಾತ್ಮಕ ಪ್ರದರ್ಶನದ ಫಲವಾಗಿ ಯು ಮುಂಬಾ ತಂಡ
41-20 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಪ್ರೊ ಕಬಡ್ಡಿಯ 6 ನೇ ಆವೃತ್ತಿಯ ಅಂತರ
ವಲಯ ಚಾಲೆಂಜ್ ವಾರದಲ್ಲಿ ಮುಂಬೈ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದ ಮೊದಲನೇ ಅವಧಿಯಲ್ಲಿ ಮುಂಬೈ17-12 ರಿಂದ ಮುನ್ನಡೆ ಪಡೆದು ಆತ್ಮವಿಶ್ವಾಸದಲ್ಲಿತ್ತು. ಸಿದ್ಧಾರ್ಥ್ ಒಮ್ಮೆ ಸೂಪರ್ ರೈಡ್ ಮಾಡಿದರೆ, ಮತ್ತೊಮ್ಮೆ ಸೂಪರ್ ಟ್ಯಾಕಲ್‌ಗೆ ಬಲಿಯಾದರು. ಇದರ ನಡುವೆಯೇ ಮುಂಬೈನ ಇತರೆ ಆಟಗಾರರು ರೋಚಕ ಆಟ ಪ್ರದರ್ಶಿಸುತ್ತಿದ್ದರು. ಇದರಿಂದಾಗಿ 25ನೇ ನಿಮಿಷದಲ್ಲಿ ಟೈಟಾನ್ಸ್ ತಂಡ 2ನೇ ಬಾರಿಗೆ ಆಲೌಟ್ ಆಯಿತು. ಮುಂಬೈ 25-16 ಮುನ್ನಡೆ ಪಡೆಯಿತು

ಮೊದಲನೇ ಅವಧಿಯಲ್ಲಿ ಮುಂಬೈಗೆ ಮುನ್ನಡೆ: 
15ನೇ ನಿಮಿಷದಲ್ಲಿ ಟೈಟಾನ್ಸ್ ತಂಡ ಆಲೌಟ್‌ಗೆ ತುತ್ತಾಯಿತು. ಈ ಹಂತದಲ್ಲಿ ಮುಂಬೈ 13-7 ರಿಂದ ಮುನ್ನಡೆ ಪಡೆದಿತ್ತು. ಒಮ್ಮೆ ಆಲೌಟ್ ಆದ ನಂತರ ಟೈ
ಟಾನ್ಸ್ ಆಕ್ರಮಣಕಾರಿ ಆಟಕ್ಕಿಳಿಯಿತು.ಈ ಮೂ ಲಕ ಟೈಟಾನ್ಸ್ ಅಂಕಗಳ ಅಂತರವನ್ನು ಕಡಿಮೆ ಮಾಡಿತು.

ತಮಿಳ್ ತಲೈವಾಸ್‌ಗೆ 2ನೇ ಗೆಲುವು
ಸತತ ಐದು ಸೋಲಿನಿಂದ ಕಂಗೆಟ್ಟಿದ್ದ ತಮಿಳ್ ತಲೈವಾಸ್ 36-31 ರಿಂದ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ ಗೆಲುವಿನ ಹಳಿಗೆ ಮರಳಿದೆ. ಮತ್ತೊಂಡೆದೆ
ತವರಿನಲ್ಲಿ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಪುಣೆ 3ನೇ ಸೋಲು ಕಂಡಿದೆ. ಮಂಗಳವಾರ ಇಲ್ಲಿ ನಡೆದ ಪಂದ್ಯದ ಅಂತರ ವಲಯ ಚಾಲೆಂಜ್ ವಾರದ 2ನೇ ಪಂದ್ಯದ ಆರಂಭದಲ್ಲಿ ಎರಡು ತಂಡಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.  ಮೊದಲಾರ್ಧದಲ್ಲಿ ತಲೈವಾಸ್ 16-15 ರಿಂದ ಅಲ್ಪ ಮುನ್ನಡೆದಿತ್ತು. ದ್ವಿತೀಯಾರ್ಧ ದಲ್ಲಿ ರೈಡಿಂಗ್, ಟ್ಯಾಕಲ್‌ನಲ್ಲಿ ಪ್ರಾಬಲ್ಯ ಮೆರೆದ ತಲೈವಾಸ್ 5 ಅಂಕಗಳ ಅಂತರದಲ್ಲಿ ಪಂದ್ಯ ಗೆದ್ದಿತು. 

ಟರ್ನಿಂಗ್ ಪಾಯಿಂಟ್: ಪಂದ್ಯ ಮುಕ್ತಾಯಕ್ಕೆ 8 ನಿಮಿಷಗಳಿದ್ದಾಗ ಆಲೌಟ್ ಗುರಿಯಾದ ಪುಣೆ ಹಿನ್ನಡೆಯಿತು. ಆ ಬಳಿಕ ಪುಣೆ ಚೇತರಿಸಿಕೊಳ್ಳಲೇ ಇಲ್ಲ

ಮಂಜು ಮಳಗುಳಿ