Asianet Suvarna News Asianet Suvarna News

ಪ್ರೊ ಕಬಡ್ಡಿ 2018: ಇಂದಿನಿಂದ ಶುರುವಾಗಲಿದೆ ಕಬಡ್ಡಿ ಹಬ್ಬ!

6ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಇಂದಿನಿಂದ  ಆರಂಭಗೊಳ್ಳಲಿದೆ. 3 ತಿಂಗಳ ಕಾಲ ನಡೆಯಲಿರುವ ಸುದೀರ್ಘ ಲೀಗ್‌ನಲ್ಲಿ 12 ತಂಡಗಳು ಹೋರಾಟ ನಡಸಲಿದೆ. ಈ ಬಾರಿ ಬೆಂಗಳೂರು ಬುಲ್ಸ್ ಕೂಡ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

Pro Kabaddi 2018 Thalaivas clash with defending champions Patna in season opener
Author
Bengaluru, First Published Oct 7, 2018, 11:36 AM IST

ಚೆನ್ನೈ(ಅ.07): ಕಬಡ್ಡಿ ಹಬ್ಬ ಮತ್ತೆ ಆರಂಭಗೊಳ್ಳುತ್ತಿದೆ. ಪ್ರೊ ಕಬಡ್ಡಿ6ನೇ ಆವೃತ್ತಿಗೆ ಭಾನುವಾರ ಚೆನ್ನೈನಲ್ಲಿ ಚಾಲನೆ ದೊರೆಯಲಿದ್ದು, ಅಭಿಮಾನಿಗಳ ಕಾತರ ಕೊನೆಗೊಳ್ಳಲಿದೆ. ಕಳೆದ ಬಾರಿಯಂತೆ ಈ ವರ್ಷವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 3 ತಿಂಗಳ ಸುದೀರ್ಘ ಟೂರ್ನಿಯ ಫೈನಲ್ ಪಂದ್ಯ 2019ರ ಜನವರಿ 5ರಂದು ನಡೆಯಲಿದೆ. ಪಂದ್ಯಾವಳಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆ ಯಲಿದೆ. 

12 ತಂಡಗಳನ್ನು ತಲಾ 6 ತಂಡಗಳಂತೆ 2 ವಲಯಗಳಾಗಿ ವಿಂಗಡಿಸಲಾಗಿದೆ. ಫೈನಲ್ ಸೇರಿ ಪಂದ್ಯಾವಳಿಯಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಪ್ರತಿ ತಂಡ 22 ಪಂದ್ಯಗಳನ್ನು ಆಡಲಿವೆ. ಇದರಲ್ಲಿ ತನ್ನವಲಯದಲ್ಲೇ 15 ಪಂದ್ಯಗಳನ್ನು ಆಡಿದರೆ, ಇನ್ನುಳಿದ 7 ಪಂದ್ಯಗಳನ್ನು ಮತ್ತೊಂದು ವಲಯದಲ್ಲಿರುವ ತಂಡದ ಎದುರು ಆಡಲಿದೆ.

2 ವಲಯಗಳಿಂದ ಅಗ್ರ 3 ತಂಡಗಳು ಪ್ಲೇ-ಆಫ್ ಹಂತಕ್ಕೆ ಪ್ರವೇಶ ಪಡೆಯಲಿವೆ. ಪ್ಲೇ-ಆಫ್‌ನಲ್ಲಿ 3 ಎಲಿಮಿನೇಟರ್, 2 ಕ್ವಾಲಿಫೈಯರ್ ಹಾಗೂ 1 ಫೈನಲ್ ನಡೆಯಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1 ರಲ್ಲಿಸೆಣಸಲಿವೆ. 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ.

ಎಲಿಮಿನೇಟರ್‌ನಲ್ಲಿ ಸೋಲುವ ತಂಡಗಳು ನೇರವಾಗಿ ಹೊರಬಿದ್ದರೆ, ಗೆಲ್ಲುವ ತಂಡಗಳು ಎಲಿ ಮಿನೇಟರ್-3ರಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ದಲ್ಲಿ ಗೆಲ್ಲುವ ತಂಡ, ಕ್ವಾಲಿಫೈಯರ್ ೧ರಲ್ಲಿ ಸೋಲುವ ತಂಡ ವನ್ನು ಎದುರಿಸಲಿದೆ. ಕ್ವಾಲಿಫೈಯರ್ ೧ರಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಗೇರಲಿದ್ದು, ಕ್ವಾಲಿಫೈಯರ್ 2ರಲ್ಲಿ ಗೆಲ್ಲುವ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದೆ. 

ಮೊದಲ ದಿನ 2 ರೋಚಕ ಪಂದ್ಯ: 6ನೇ ಆವೃತ್ತಿಯ ಉದ್ಘಾಟನಾ ಚರಣಕ್ಕೆ ಚೆನ್ನೈ ಆತಿಥ್ಯ ವಹಿಸಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಟ್ನಾ
ಪೈರೇಟ್ಸ್, ಸ್ಥಳೀಯ ತಂಡ ತಮಿಳ್ ತಲೈವಾಸ್ ವಿರುದ್ಧ ಸೆಣಸಲಿದೆ. ದಿನದ 2ನೇ ಪಂದ್ಯ ಮಹಾರಾಷ್ಟ್ರ ಡರ್ಬಿಗೆ ಸಾಕ್ಷಿಯಾಗಲಿದೆ. ಪುಣೇರಿ ಪಲ್ಟನ್, ಯು ಮುಂಬಾ ಎದುರು ಕಣಕ್ಕಿಳಿಯಲಿದೆ. ದಿನದ 2 ಪಂದ್ಯಗಳು ಭಾರೀ ರೋಚಕತೆ ಹುಟ್ಟುಹಾಕಿವೆ.

ಉದ್ಘಾಟನಾ ಪಂದ್ಯದಲ್ಲಿ ನಟಿ ಶ್ರುತಿ ಹಾಸನ್ ನಟ ತಮಿಳ್ ತಲೈವಾಸ್ ರಾಯಭಾರಿ ವಿಜಯ್ ಸೇಥುಪತಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಆಗಿರುವುದರಿಂದ ಕ್ರೀಡಾಂಗಣ ಭರ್ತಿಯಾಗುವ ನಿರೀಕ್ಷೆ ಇದೆ.

Follow Us:
Download App:
  • android
  • ios