ನೊಯ್ದಾ(ನ.02): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 44 ಹಾಗೂ 45ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಯುಪಿ ಯೋಧಾ ವಿರುದ್ಧ 46-24 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, 2ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್ 36-25 ಅಂಕಗಳ ಗೆಲುವು ಸಾಧಿಸಿದೆ.

ಮೊದಲ ಪಂದ್ಯದಲ್ಲಿ ಅಬ್ಬರಿಸಿದ ತಮಿಳ್ ತಲೈವಾಸ್ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದಲ್ಲಿ 26-11 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡ ತಮಿಳ್ ತಲೈವಾಸ್ , ದ್ವಿತೀಯಾರ್ಧದ ಅಂತ್ಯದಲ್ಲಿ 46-24 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಇನ್ನು 2ನೇ ಪಂದ್ಯದಲ್ಲಿ ರೋಚಕ ಹೋರಾಟ ಕಂಡು ಬಂತು. ಮೊದಲು ಅಂಕ ಖಾತೆ ತೆರೆದು ಗುಜರಾತ್, ಮೊದಲಾರ್ಧದ ಅಂತ್ಯದಲ್ಲಿ 14-13 ಅಂಕಗಳಿಸಿ ಕೇವಲ 1 ಅಂಕದಿಂದ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಗುಜರಾತ್ ಆಕ್ರಮಣಕಾರಿ ಆಟವಾಡಿತು. ಹೀಗಾಗಿ 36-25 ಅಂಕಗಳ ಅಂತರದ ಗೆಲುವು ಸಾಧಿಸಿತು.