ಪುಣೆ(ಅ.20): ಯು ಮುಂಬಾ ವಿರುದ್ಧದ  ಪ್ರೊ ಕಬಡ್ಡಿ ಲೀಗ್‌ನ 26ನೇ ಪಂದ್ಯದದಲ್ಲಿ ಪುಣೇರಿ ಪಲ್ಟಾನ್ 1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ  ಮೂಲಕ ಎ ಗುಂಪಿನ ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟಾನ್ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಮೊದಲಾರ್ಧದಲ್ಲಿ ಪುಣೇರಿ ಪಲ್ಟಾನ್ ಯಶಸ್ಸು ಸಾಧಿಸಿತು. ರೈಡ್ ಹಾಗೂ ಟ್ಯಾಕಲ್ ಮೂಲಕ ಪುಣೆ ಮುನ್ನಡೆ ಸಾಧಿಸಿತು. ಮೊದಲಾರ್ಧದ ಅಂತ್ಯದಲ್ಲಿ ಪುಣೇರಿ ಪಲ್ಟಾನ್ 17-12 ಅಂಕಗಳ ಮುನ್ನಡೆ ಪಡೆಯಿತು.

ದ್ವಿತೀಯಾರ್ಧದಲ್ಲಿ ಗೇರ್ ಬದಲಾಯಿಸಿದ ಯು ಮುಂಬಾ ದಿಟ್ಟ ಹೋರಾಟ ನೀಡಿತು. ಆದರೆ ಅಷ್ಟೇ ವೇಗದಲ್ಲಿ ತಿರುಗೇಟು ನೀಡಿದ ಪುಣೇರಿ ಪಲ್ಟಾನ್ ಮತ್ತೆ ಮುನ್ನಡೆ ಕಾಯ್ದುಕೊಂಡಿತು. ಈ ಮೂಲಕ ಅಂತಿಮ ಹಂತದಲ್ಲಿ ಪುಣೇರಿ 33-32 ಅಂಕಗಳ ಗೆಲುವು ಸಾಧಿಸಿತು.