Asianet Suvarna News Asianet Suvarna News

ಬೆಂಗಳೂರು ಬುಲ್ಸ್‌ಗೆ 7ನೇ ಗೆಲುವು-ಅಂಕಪಟ್ಟಿಯಲ್ಲಿ ಮೊದಲ ಸ್ಥಾನ!

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ಓಟ ಮುಂದುವರಿಸಿದೆ. ಜೈಪುರ ವಿರುದ್ಧದ ರೋಚಕ ಹೋರಾಟದಲ್ಲಿ ಬೆಂಗಳೂರು ಗೆಲುವಿನ ನಗೆ ಬೀರಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Pro kabaddi 2018 Bengaluru Bulls Beat Jaipur Pink Panthers
Author
Bengaluru, First Published Nov 19, 2018, 9:26 AM IST

ಅಹಮ್ಮದಾಬಾದ್(ನ.19): ಯುವ ಪ್ರತಿಭೆ ಪವನ್‌ರ ಆಕ್ರಮಣಕಾರಿ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯ ಅಂತರ ವಲಯ ಚಾಲೆಂಜ್‌ನ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 45-32 ಅಂಕಗಳ ಅಧಿಕಾರಯುತ ಜಯ ಸಾಧಿಸಿತು. 

ಬುಲ್ಸ್‌ಗೆ ಲೀಗ್ ನಲ್ಲಿ ಇದು 7ನೇ ಜಯ. ಮೊದಲ ರೈಡ್‌ನಲ್ಲೇ ಔಟ್ ಆಗುವ ಮೂಲಕ ರೋಹಿತ್ ಕುಮಾರ್ ಬುಲ್ಸ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದರು. ಆದರೆ, ಮರು ರೈಡ್‌ನಲ್ಲಿ ಅಂಕಗಳಿಸುವ ಮೂಲಕ ಪವನ್, ಬುಲ್ಸ್ ಖಾತೆ ತೆರದರು. ಆದರೆ, ಬುಲ್ಸ್ ಆಟಗಾರರ ಮೇಲೆರಗಿದ ಜೈಪುರ ತಂಡ ಪಂದ್ಯದ 11ನೇ ನಿಮಿಷದಲ್ಲಿ
ಎದುರಾಳಿಗಳನ್ನು ಆಲೌಟ್ ಮಾಡುವ ಮೂಲಕ 11-5 ಅಂಕಗಳ ಭಾರೀ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಯುವಕರ ಐಕಾನ್ ಕಬಡ್ಡಿ ಪಟು ಬೆಂಗಳೂರು ಬುಲ್ಸ್ ತಂಡದ ಪವನ್!

ಆದರೆ, ಧೃತಿಗೆಡದೆ ಕೆಚ್ಚದೆಯ ಆಟ ಪ್ರದರ್ಶಿಸಿದ ಬೆಂಗಳೂರು ಆಟಗಾರರು, ಜೈಪುರಕ್ಕೆ ತಿರುಗೇಟು ನೀಡಿದರು. ಅದರಲ್ಲೂ 13ನೇ ನಿಮಿಷದಲ್ಲಿ ಒಂದೇ ರೈಡ್‌ನಲ್ಲಿ 4 ಬಲಿ ಪಡೆದ ಕಾಶಿಲಿಂಗ ಅಡಕೆ ಅಂಕಗಳ ಹಿನ್ನಡೆಯನ್ನು 11-13ಕ್ಕೆ ಇಳಿಸಿದರು.17ನೇ ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿ ತಮ್ಮ ಬಲ ಪ್ರದರ್ಶಿಸಿದರು. ಅಲ್ಲದೇ 16-15 ಮುನ್ನಡೆ ಸಾಧಿಸಿದರು. 

ಇದನ್ನೂ ಓದಿ: 2019ರ ಐಪಿಎಲ್‌ನಲ್ಲಿ ಬದಲಾಗಲಿದೆ 3 ತಂಡದ ನಾಯಕತ್ವ !

ಆದರೆ, ಬೇಡದ ಟ್ಯಾಕಲ್‌ಗೆ ಕೈ ಹಾಕಿ ಎದುರಾಳಿಗೆ ಅಂಕ ನೀಡಿದ ಬುಲ್ಸ್ ಮೊದಲಾರ್ಧಕ್ಕೆ17-18 ರಿಂದ ಹಿನ್ನಡೆ ಅನುಭವಿಸಿತು. ದ್ವಿತೀಯಾರ್ಧದಲ್ಲಿ ಬುಲ್ಸ್ ಮತ್ತಷ್ಟು ಚುರುಕಿನ ಆಟಕ್ಕೆ ಮುಂದಾಯಿತು. ಪಂದ್ಯ ಮುಕ್ತಾಯಕ್ಕೆ 6 ನಿಮಿಷ ಇದ್ದಾಗ ಜೈಪುರವನ್ನು ಆಲೌಟ್ ಮಾಡಿದ ಬುಲ್ಸ್ 37-28ಕ್ಕೆ ಏರಿಸಿಕೊಂಡಿತು. ಇದೇ ಅಂತರ ಕಾಯ್ದುಕೊಂಡ ಬುಲ್ಸ್ 13 ಅಂಕಗಳ ಅಂತರದಲ್ಲಿ ಜಯಿಸಿತು.

ವಿನಯ್ ಕುಮಾರ್ ಡಿ.ಬಿ.

Follow Us:
Download App:
  • android
  • ios