ವರದಿ ಬಗ್ಗೆ ಕಿಡಿಕಾರಿರುವ ಪ್ರೀತಿ, 'ನಾವು ಹಣಕೊಟ್ಟು ಲೇಖನ ಬರೆಸುವುದಿಲ್ಲ. ಹಣಕೊಟ್ಟು ಲೇಖನ ಬರೆಸಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ನನ್ನ ಮತ್ತು ವೀರೂ ಜತೆಗಿನ ಗಂಭೀರ ಮಾತುಕತೆಯನ್ನು ದೊಡ್ಡದಾಗಿ ಬಿಂಬಿಸಿ ನನ್ನನ್ನು ಖಳನಾಯಕಿಯಾಗಿ ಬಿಂಬಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು[ಮೇ.11]: ಪ್ರೀತಿ ಜಿಂಟಾ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೆಂಟರ್ ಸೆಹ್ವಾಗ್ ಅವರನ್ನು ನಿಂದಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ KXIP ತಂಡದ ಸಹ ಒಡತಿ ಪ್ರೀತಿ ಜಿಂಟಾ ಸ್ಪಷ್ಟನೆ ನೀಡಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಅಶ್ವಿನ್ ಅವರನ್ನು ಬ್ಯಾಟಿಂಗ್’ಗೆ ಕಳಿಸಿದ್ದ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರೀತಿ ಜಿಂಟಾ ಹಾಗೂ ವಿರೇಂದ್ರ ಸೆಹ್ವಾಗ್ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿತ್ತು.

ಇದನ್ನು ಓದಿ:ಸೆಹ್ವಾಗ್ ಜತೆ ಜಗಳವಾಡಿದ ಪ್ರೀತಿ ಜಿಂಟಾ..!

ಈ ವರದಿ ಬಗ್ಗೆ ಕಿಡಿಕಾರಿರುವ ಪ್ರೀತಿ, 'ನಾವು ಹಣಕೊಟ್ಟು ಲೇಖನ ಬರೆಸುವುದಿಲ್ಲ. ಹಣಕೊಟ್ಟು ಲೇಖನ ಬರೆಸಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ನನ್ನ ಮತ್ತು ವೀರೂ ಜತೆಗಿನ ಗಂಭೀರ ಮಾತುಕತೆಯನ್ನು ದೊಡ್ಡದಾಗಿ ಬಿಂಬಿಸಿ ನನ್ನನ್ನು ಖಳನಾಯಕಿಯಾಗಿ ಬಿಂಬಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಫೇಕ್’ನ್ಯೂಸ್ ಎಂಬ ಹ್ಯಾಷ್’ಟ್ಯಾಗ್ ಕೂಡ ನೀಡಿದ್ದಾರೆ.

Scroll to load tweet…

ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಆಡಿದ 10 ಪಂದ್ಯಗಳಲ್ಲಿ 6 ಗೆಲುವು 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಪ್ರವೇಶಿಸುವ ವಿಶ್ವಾಸದಲ್ಲಿದೆ. ರಾಜಸ್ಥಾನ ವಿರುದ್ಧ ಮುಗ್ಗರಿಸಿದ್ದರು ಮುಂದಿನ ಕೆಕೆಆರ್ ವಿರುದ್ಧ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ ಅಶ್ವಿನ್ ಪಡೆ.