ಸೆಹ್ವಾಗ್ ಜತೆ ಜಗಳವಾಡಿದ ಪ್ರೀತಿ ಜಿಂಟಾ..!

Upset Preity Zinta in verbal altercation with Virender Sehwag
Highlights

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ಮನೋಜ್ ತಿವಾರಿ ಬದಲು ನಾಯಕ ಅಶ್ವಿನ್ ಅವರನ್ನು ಬ್ಯಾಟಿಂಗ್’ಗೆ ಕಳಿಸಿದ್ದರು. ಆದರೆ ಅಶ್ವಿನ್ ಶೂನ್ಯ ಸುತ್ತಿ ಪೆವಿಲಿಯನ್’ಗೆ ಮರಳಿದ್ದರು.

ಮುಂಬೈ[ಮೇ.11]: ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ಮುಗ್ಗರಿಸಿದ ಬೆನ್ನಲ್ಲೇ ಪಂಜಾಬ್ ಸಹ ಒಡತಿ ಪ್ರೀತಿ ಜಿಂಟಾ ತಂಡದ ಮೆಂಟರ್ ಸೆಹ್ವಾಗ್’ರನ್ನು ನಿಂದಿಸಿದ್ದಾರೆ ಎಂದು ವರದಿಯಾಗಿದೆ.

ರಾಜಸ್ಥಾನ ರಾಯಲ್ಸ್ ನೀಡಿದ್ದ 158 ರನ್’ಗಳ ಸುಲಭ ಗುರಿ ಬೆನ್ನತ್ತಲು ಪಂಜಾಬ್ ವಿಫಲವಾಗಿತ್ತು. ಪ್ರೀತಿ ಜಿಂಟಾ, ನೆಸ್ ವಾಡಿಯಾ ಹಾಗೂ ಉಧ್ಯಮಿ ಮೋಹಿತ್ ಬುರ್ಮಾನ್ ಸಹ ಒಡೆತನದ ಪ್ರಾಂಚೈಸಿಯೊಂದಿಗೆ ಸೆಹ್ವಾಗ್ ತಂಡದ ಮೆಂಟರ್ ಆಗಿದ್ದ 5 ವರ್ಷಗಳ ಒಡನಾಟ ಈ ಆವೃತ್ತಿಯ ಬಳಿಕ ಕೊನೆಯಾಗಲಿದೆ ಎನ್ನಲಾಗುತ್ತಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ಮನೋಜ್ ತಿವಾರಿ ಬದಲು ನಾಯಕ ಅಶ್ವಿನ್ ಅವರನ್ನು ಬ್ಯಾಟಿಂಗ್’ಗೆ ಕಳಿಸಿದ್ದರು. ಆದರೆ ಅಶ್ವಿನ್ ಶೂನ್ಯ ಸುತ್ತಿ ಪೆವಿಲಿಯನ್’ಗೆ ಮರಳಿದ್ದರು. ಪ್ರಸ್ತುತ ಕಿಂಗ್ಸ್ ಇಲೆವನ್ ಪಂಜಾಬ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಸರಿಯಾದ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲವಾಗಿದ್ದೀರ ಎಂದು ಪ್ರೀತಿ ಕೂಗಾಡುವಾಗ ಆದಷ್ಟು ಸಮಾಧಾನವಾಗಿಯೇ ವರ್ತಿಸಿದ ಸೆಹ್ವಾಗ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಈ ವಿಚಾರದ ಕುರಿತಂತೆ ಸೆಹ್ವಾಗ್ ಆಗಲಿ ಇಲ್ಲವೇ ಪ್ರೀತಿ ಜಿಂಟಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

loader