ಪ್ರೀತಿ ಜಿಂಟಾ ಒಡೆತನದ ಸ್ಟೆಲ್ಲೆನ್‌'ಬಾಷ್ ಮೊನಾಚ್ಸ್'ರ್ ತಂಡವು ತವರಿನಲ್ಲಿ ನವೆಂಬರ್ 4ರಂದು ನಡೆಯುವ ಪಂದ್ಯದಲ್ಲಿ ಜೋಹಾನ್ಸ್'ಬರ್ಗ್ ಜೈಂಟ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಜೋಹಾನ್ಸ್‌ಬರ್ಗ್(ಸೆ.09): ನಟಿ, ಐಪಿಎಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಒಡತಿ ಪ್ರೀತಿ ಜಿಂಟಾ, ದಕ್ಷಿಣ ಆಫ್ರಿಕಾದ ಗ್ಲೋಬಲ್ ಟಿ20 ಲೀಗ್‌'ನಲ್ಲಿ ತಂಡ ಖರೀದಿಸಿದ್ದಾರೆ.

ಎಂಟು ಫ್ರಾಂಚೈಸಿ ತಂಡಗಳ ಪೈಕಿ ಒಂದಾದ ಸ್ಟೆಲ್ಲೆನ್‌'ಬಾಷ್ ಮೊನಾಚ್ಸ್'ರ್ ತಂಡದ ಮಾಲೀಕತ್ವವನ್ನು ಪ್ರೀತಿ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿ ಈ ತಂಡದ ತಾರಾ ಆಟಗಾರನಾಗಿದ್ದಾರೆ.

ಪ್ರೀತಿ ಜಿಂಟಾ ಒಡೆತನದ ಸ್ಟೆಲ್ಲೆನ್‌'ಬಾಷ್ ಮೊನಾಚ್ಸ್'ರ್ ತಂಡವು ತವರಿನಲ್ಲಿ ನವೆಂಬರ್ 4ರಂದು ನಡೆಯುವ ಪಂದ್ಯದಲ್ಲಿ ಜೋಹಾನ್ಸ್'ಬರ್ಗ್ ಜೈಂಟ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಐಪಿಎಲ್'ನಲ್ಲಿ ಕಳೆದ 10 ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಹಾಗಾಗಿ ಪ್ರೀತಿ ಈಗ ದಕ್ಷಿಣ ಆಫ್ರಿಕಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.