ಇಂದು ನಡೆದ ಪಂದ್ಯದಲ್ಲಿ ಯುಎಸ್ ಓಪನ್ ಚಾಂಪಿಯನ್ ಪ್ರಣಯ್ 21-15, 21-17 ನೇರ ಗೇಮ್‌ಗಳಿಂದ ಡೆನ್ಮಾರ್ಕ್ ಓಪನ್ ರನ್ನರ್ ಅಪ್ ಕೊರಿಯಾದ ಲೀ ಹ್ಯುನ್ ಎದುರು ಜಯ ಸಾಧಿಸಿದರು.

ಪ್ಯಾರೀಸ್(ಅ.25): ಭಾರತದ ಯುವ ಶಟ್ಲರ್‌'ಗಳಾದ ಎಚ್.ಎಸ್. ಪ್ರಣಯ್ ಮತ್ತು ಸಾಯಿ ಪ್ರಣೀತ್, ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌'ನಲ್ಲಿ ಶುಭಾರಂಭ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ ಪಂದ್ಯದಲ್ಲಿ ಯುಎಸ್ ಓಪನ್ ಚಾಂಪಿಯನ್ ಪ್ರಣಯ್ 21-15, 21-17 ನೇರ ಗೇಮ್‌ಗಳಿಂದ ಡೆನ್ಮಾರ್ಕ್ ಓಪನ್ ರನ್ನರ್ ಅಪ್ ಕೊರಿಯಾದ ಲೀ ಹ್ಯುನ್ ಎದುರು ಜಯ ಸಾಧಿಸಿದರು.

ಇನ್ನು ಮತ್ತೊಂದು ಪಂದ್ಯದಲ್ಲಿ ಬಿ. ಸಾಯಿ ಪ್ರಣೀತ್ 21-13, 21-23, 21-19 ಗೇಮ್‌'ಗಳಿಂದ ಥಾಯ್ಲೆಂಡ್‌ನ ಕೊಸಿಟ್ ಪೇತ್ಪ್ರಾದಾಬ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿದರು.