ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಮಾತಿದೆ. ಆದರೆ ಜಗತ್ತಿನಲ್ಲಿ ಹೀಗೂ ಮೋಸ ಮಾಡಬಹುದಾ ಅನ್ನೋದಕ್ಕೆ ಅತ್ಯುತ್ತಮ ಉದಾಹರಣೆ ಈ ಸ್ಟೋರಿ. ಕೇವಲ ಫೇಸ್ಬುಕ್ ಲೈಕ್ಗಳನ್ನ ಹೆಚ್ಚಿಸಿಕೊಳ್ಳಲು ಇಲ್ಲೊಬ್ಬ ವಿರುಷ್ಕಾ ಜೋಡಿಯನ್ನೇ ಬಳಸಿಕೊಂಡಿದ್ದಾನೆ. ಕೊಹ್ಲಿ ಮತ್ತು ಅನುಷ್ಕಾ ಹೆಸರನ್ನು ಬಳಸಿಕೊಂಡು ಫೇಸ್‌ಬುಕ್ ಪೇಜ್ ಎಂಥಹ ಎಡವಟ್ಟು ಮಾಡಿದೆ. ವಿರುಷ್ಕಾ ಆಭಿಮಾನಿಗಳಿಗೆ ಹೇಗೆ ಮೋಸ ಮಾಡಿದೆ ಇಲ್ಲಿದೆ ನೋಡಿ ವಿವರ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಕ್ವೀನ್ ಅನುಷ್ಕಾ ಶರ್ಮಾ. ಅಬ್ಬಾ ಈ ಜೋಡಿನ ನೋಡೋಕೆ 2 ಕಣ್ಣು ಸಾಲದು. ಈ ಜೋಡಿ ಒಂದು ರೀತಿ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರೋದ್ರಲ್ಲೀ ಡೌಟೇ ಇಲ್ಲ. ಇನ್ನೂ ನಮ್ಮ ದೇಶದ ಯುವ ಜನತೆಗಂತೂ ಇವರಿಬ್ಬರೇ ರೋಲ್ ಮಾಡೆಲ್ಸ್. ಆ ರೀತಿ ಇದೆ ಕೊಹ್ಲಿ ಮತ್ತು ಅನುಷ್ಕಾ ಜೋಡಿ.
ಈ ಲವ್ಲಿ ಜೋಡಿ ಏನ್ ಮಾಡಿದ್ರೂ ಸುದ್ದಿನೇ. ಎಲ್ಲೇ ಹೋಗಲಿ, ಎಲ್ಲೇ ಬರಲಿ ಹಾಟ್ ನ್ಯೂಸ್ ಆಗಿರುತ್ತೆ. ಆದ್ರೆ ಎಂದಿಗೂ ಕೆಟ್ಟ ಅಥವಾ ನೆಗೆಟಿವ್ ಸುದ್ದಿಗೆ ಕಾರಣರಾಗದವರಲ್ಲ. ಅವರಾಯಿತು ಅವರ ಪಾಡಾಯ್ತು ಅನ್ನುವಂತಿರೋ ಸ್ವೀಟ್ ಜೋಡಿ ಇದು. ಆದ್ರೆ ಈಗ ಇದೇ ಜೋಡಿ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡ್ತಿದೆ. ವಿರುಷ್ಕಾ ಜೋಡಿಯನ್ನ ಬಳಸಿಕೊಂಡು ಫೇಸ್ ಬುಕ್ ಪೇಜ್ ಒಂದು ತನ್ನ ಬೇಳೆಯನ್ನ ಬೇಯಿಸಿಕೊಳ್ಳಲು ಹೊರಟಿದೆ.
ಇನ್ವೈಟ್ ಮಾಡಿ ವಿರುಷ್ಕಾರೊಂದಿಗೆ ಮಾತನಾಡಿ..!
ಸದ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹನಿಮೂನ್ನಲ್ಲಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅವರದ್ದೇ ಲೋಕದಲ್ಲಿ ಅವರಿಬ್ಬರು ವಿಹರಿಸುತ್ತಿದ್ದಾರೆ. ಆದ್ರೆ ಇತ್ತ ಭಾರತದ ಫೇಸ್ ಬುಕ್ ಪೇಜ್ವೊಂದು ಕೊಹ್ಲಿ ಮತ್ತು ಅನುಷ್ಕಾ ಫೆಬ್ರವರಿ 9 ಅಂದ್ರೆ ಇಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಬರ್ತಿದ್ದಾರೆ. ನೀವೂ ಕೂಡ ಅವರನ್ನ ಭೇಟಿ ಮಾಡಬಹುದು. ಆದ್ರೆ ವಿರುಷ್ಕಾರನ್ನ ಭೇಟಿ ಮಾಡಬೇಕಂದ್ರೆ ಈ ಕಾರ್ಯಕ್ರಮಕ್ಕೆ ಹೆಚ್ಚೆಚ್ಚು ಜನರನ್ನ ಇನ್ವೈಟ್ ಮಾಡಬೇಕು. ಅತೀ ಹೆಚ್ಚು ಜನರನ್ನ ಇನ್ವೈಟ್ ಮಾಡೋ ಟಾಪ್ 50 ಜನರಿಗೆ ವಿರುಷ್ಕಾರನ್ನ ಭೇಟಿಯಾಗುವ ಸದಾವಕಾಶ ಅಂತ ಬಾಲಿವುಡ್ ರಿವ್ಯೂಸ್ ಫಿಜಿ ಅನ್ನೋ ಫೇಜ್ ಬರೆದುಕೊಂಡಿತ್ತು.
ಬಾಲಿವುಡ್ ರಿವ್ಯೂಸ್ ಫಿಜಿ ಅನ್ನೋ ಪೇಜ್ ಹೀಗೆ ಒಂದು ಈವೆಂಟ್ ಅನ್ನ ಕ್ರಿಯೇಟ್ ಮಾಡಿದ್ದೇ ತಡ, ವಿರುಷ್ಕಾ ಅಭಿಮಾನಿಗಳು ತಾಮುಂದು ನಾಮುಂದು ಎಂಬಂತೆ ಈ ಕಾರ್ಯಕ್ರಮಕ್ಕೆ ಇನ್ವೈಟ್ ಮಾಡಿದ್ರು. ಆದ್ರೆ ಪಾಪ ಯಾರಿಗೂ ಗೊತ್ತೇ ಇಲ್ಲ, ಯಾರೂ ಕೂಡ ಇಂದು ವಿರುಷ್ಕಾರನ್ನ ಮೀಟ್ ಮಾಡೋದಿಲ್ಲ. ಅಷ್ಟೇ ಯಾಕೆ ಆ ಕಾರ್ಯಕ್ರಮಕ್ಕೆ ಕೊಹ್ಲಿ ಮತ್ತು ಅನುಷ್ಕಾ ಬರೋದೇ ಇಲ್ಲ. ಇನ್ನೂ ಆ ಪೇಜ್ ಆಡ್ಮಿನ್ ಈ ಕಾರ್ಯಕ್ರಮ ಆಯೋಜಿಸಿರೋದೇ ಸುಳ್ಳು. ಅದಕ್ಕೆ ಕಾರಣ ಕೊಹ್ಲಿ ಮತ್ತು ಅನುಷ್ಕಾ ನ್ಯೂಜಿಲೆಂಡ್ನಲ್ಲಿ ಇಲ್ವೇ ಇಲ್ಲ.
ಹೌದು, ಕೇವಲ ಪೇಜ್ನ ಲೈಕ್ಸ್ , ಸಬ್ಸ್ಕ್ರೈಬರ್ಸ್ ಮತ್ತು ಶೇರ್ಗಳನ್ನ ಹೆಚ್ಚಿಸುವ ದುರುದ್ದೇಶದಿಂದ ಈ ರೀತಿಯ ಚೀಪ್ ಗಿಮಿಕ್ಗೆ ಇಳಿದಿದ್ದಾರೆ. ಸದ್ಯ ಬಂದಿರೋ ಮಾಹಿತಿ ಪ್ರಕಾರ ನ್ಯೂಜಿಲೆಂಡ್ನಲ್ಲಿ ಯಾವುದೇ ರೀತಿಯ ಕೊಹ್ಲಿ ಕಾರ್ಯಕ್ರಮಗಳು ನಿಗದಿಯಾಗಿಲ್ಲ. ಇನ್ನೂ ಅಲ್ಲೇ ಇರೋ ಟೀಂ ಇಂಡಿಯಾ ಆಟಗಾರರಿಗೂ ಇದರ ಬಗ್ಗೆ ಮಾಹಿತಿ ಇಲ್ಲವಂತೆ.
ಒಟ್ಟಿನಲ್ಲಿ ಈ ಫೇಸ್ಬುಕ್ ಪೇಜ್‌ನಲ್ಲಿ ಬಂದ ಈ ಸುದ್ದಿ ಸುಳ್ಳು ಅನ್ನೋದು ಖಚಿತ. ಆದ್ರೆ ಈ ರೀತಿ ಸೆಲಬ್ರಿಟಿಗಳ ಹೆಸರನ್ನ ಉಪಯೋಗಿಸಿಗೊಂಡು ಚೀಪ್ ಗಿಮಿಕ್ಗಳನ್ನ ಮಾಡಿಕೊಂಡು, ತಮ್ಮ ಬೇಳೆ ಬೇಯಿಸಿಕೊಳ್ಳೋದು ಎಷ್ಟು ಸರಿ..
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 9, 2019, 12:55 PM IST