ಆಸೀಸ್'ಗೆ ಪಾಂಟಿಂಗ್ ಸಹಾಯಕ ಕೋಚ್

First Published 10, Jan 2018, 1:11 PM IST
Ponting named assistant for T20Is
Highlights

ಇತ್ತೀಚೆಗಷ್ಟೇ ಐಪಿಎಲ್'ನಲ್ಲಿ ಡೆಲ್ಲಿ ಡೇರ್'ಡೆವಿಲ್ಸ್ ತಂಡದ ಕೋಚ್ ಆಗಿರುವ ಪಾಂಟಿಂಗ್, ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರ್ಗದರ್ಶನ ನೀಡಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಪಾಂಟಿಂಗ್ ಹಾಗೂ ಡರೆನ್ ಲೆಹಮಾನ್ ಜೊತೆ ದಶಕಗಳ ಕಾಲ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.

ಸಿಡ್ನಿ(ಜ.10): ಮುಂದಿನ ತಿಂಗಳು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕಗೊಂಡಿದ್ದಾರೆ.

ಪ್ರಧಾನ ಕೋಚ್ ಡರೆನ್ ಲೆಹಮನ್ ಅಡಿಯಲ್ಲಿ ಪಾಂಟಿಂಗ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿತು. 2019ರಲ್ಲಿ ತಮ್ಮ ಗುತ್ತಿಗೆ ಅವಧಿ ಮುಕ್ತಾಯಗೊಂಡ ಬಳಿಕ ಕೋಚ್ ಆಗಿ ಮುಂದುವರಿಯುವ ಆಸಕ್ತಿಯಿಲ್ಲ ಎಂದು ಲೆಹಮನ್ ಕೆಲ ದಿನಗಳ ಹಿಂದೆ ಹೇಳಿದ್ದರು.

ಲೆಹಮಾನ್ ಸ್ಥಾನಕ್ಕೆ ಪಾಂಟಿಂಗ್‌'ರನ್ನು ತರುವ ಉದ್ದೇಶ ಕ್ರಿಕೆಟ್ ಆಸ್ಟ್ರೇಲಿಯಾಗಿದೆ ಎನ್ನಲಾಗಿದ್ದು, ಆ ನಿಟ್ಟಿನಲ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಪಾಂಟಿಂಗ್‌'ರನ್ನು ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

loader