ಹುಬ್ಬಳ್ಳಿಯಲ್ಲಿ ಎರಡನೇ ಚರಣದ ಕೆಪಿಎಲ್ ಟೂರ್ನಿ ಆರಂಭಗೊಂಡಿದ್ದು, ಪಂದ್ಯ ವೀಕ್ಷಿಸಲು ಬಂದಿದ್ದ ಉತ್ತರಭಾರತ ಮೂಲದ ವ್ಯಕ್ತಿಯೋರ್ವನಿಂದ ಎಎಸ್ಐ ಮಹೇಶ್ ಕುರ್ತಕೋಟಿ 17 ಸಾವಿರ ರುಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿ[ಆ.22]: ಕರ್ನಾಟಕ ಪ್ರೀಮಿಯರ್ ಲೀಗ್ ವೀಕ್ಷಿಸಲು ಬಂದಿದ್ದ ವೀಕ್ಷಕನ ಬಳಿ 17 ಸಾವಿರ ರುಪಾಯಿ ಹಣ ವಸೂಲಿ ಮಾಡಿದ ಆರೋಪದಡಿ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್ಐ ಮಹೇಶ್ ಕುರ್ತಕೋಟಿ ಅವರನ್ನು ಅಮಾನತು ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಬ್ಬಳ್ಳಿಯಲ್ಲಿ ಎರಡನೇ ಚರಣದ ಕೆಪಿಎಲ್ ಟೂರ್ನಿ ಆರಂಭಗೊಂಡಿದ್ದು, ಪಂದ್ಯ ವೀಕ್ಷಿಸಲು ಬಂದಿದ್ದ ಉತ್ತರಭಾರತ ಮೂಲದ ವ್ಯಕ್ತಿಯೋರ್ವನಿಂದ ಎಎಸ್ಐ ಮಹೇಶ್ ಕುರ್ತಕೋಟಿ 17 ಸಾವಿರ ರುಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಎಎಸ್ಐ ಮಹೇಶ್ ಕುರ್ತಕೋಟಿ ಜತೆಗೆ ಪೇದೆಗಳಾದ,ಬಸವರಾಜ ಬಾವಿಹಾಳು ಅಬಯ್ ಕಟ್ನಳ್ಳಿ, ಮಂಜುನಾಥ ಏಣಗಿ ಅವರನ್ನು ಅಮಾನತು ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್ ನಾಗರಾಜ್ ಅದೇಶ ಹೊರಡಿಸಿದ್ದು, ಈ ಎಲ್ಲಾ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.