ಮಣಿಪುರದ ಇಂಫಾಲ್‌ನಲ್ಲಿ 3.3 ಎಕರೆ ಜಾಗದಲ್ಲಿ ಅಕಾಡೆಮಿ ನಿರ್ಮಾಣಗೊಂಡಿದೆ. 2013ರಲ್ಲಿ ಮಣಿಪುರ ಸರ್ಕಾರ, ಮೇರಿಗೆ ಜಾಗ ಮಂಜೂರು ಮಾಡಿತ್ತು. ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿಯಿಂದ ಮೇರಿಗೆ ಆರ್ಥಿಕ ನೆರವು ದೊರೆತಿತ್ತು.

ನವದೆಹಲಿ(ಮಾ.13): 5 ಬಾರಿ ವಿಶ್ವ ಚಾಂಪಿಯನ್, ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್‌'ರ ಬಾಕ್ಸಿಂಗ್ ಅಕಾಡೆಮಿಯನ್ನು ಮಾ.16ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಮಣಿಪುರದ ಇಂಫಾಲ್‌ನಲ್ಲಿ 3.3 ಎಕರೆ ಜಾಗದಲ್ಲಿ ಅಕಾಡೆಮಿ ನಿರ್ಮಾಣಗೊಂಡಿದೆ. 2013ರಲ್ಲಿ ಮಣಿಪುರ ಸರ್ಕಾರ, ಮೇರಿಗೆ ಜಾಗ ಮಂಜೂರು ಮಾಡಿತ್ತು. ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿಯಿಂದ ಮೇರಿಗೆ ಆರ್ಥಿಕ ನೆರವು ದೊರೆತಿತ್ತು.

ಅಕಾಡೆಮಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು 20 ಬಾಲಕಿಯರು ಸೇರಿ 45 ಯುವ ಬಾಕ್ಸರ್‌'ಗಳಿಗೆ ಮೇರಿ ತರಬೇತಿ ನೀಡುತ್ತಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಒಲಿಂಪಿಕ್ ಪದಕ ವಿಜೇತರಾದ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬಾಕ್ಸರ್ ವಿಜೇಂದರ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.