ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇಗೆ ಪ್ರಧಾನಿ ಮೋದಿ ಚಾಲನೆ
* 44ನೇ ಚೆಸ್ ಒಲಿಂಪಿಯಾಡ್ ಟೂರ್ನಿಯ ಟಾರ್ಚ್ ರಿಲೇಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
* ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಅಧ್ಯಕ್ಷ ಅರ್ಕಾಡಿ ಡೊರ್ಕೋವಿಚ್ ಟಾರ್ಚ್‌ನ್ನು ಮೋದಿಗೆ ಹಸ್ತಾಂತರ
* ಇದೇ ಮೊದಲ ಬಾರಿ ಒಲಿಂಪಿಯಾಡ್‌ನಲ್ಲಿ ಟಾರ್ಚ್ ರಿಲೇ ನಡೆಸಲಾಗುತ್ತಿದೆ
ನವದೆಹಲಿ(ಜೂ.20): ಜುಲೈ 28ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ 44ನೇ ಚೆಸ್ ಒಲಿಂಪಿಯಾಡ್ (44th chess Olympiad) ಟೂರ್ನಿಯ ಟಾರ್ಚ್ ರಿಲೇಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಅಧ್ಯಕ್ಷ ಅರ್ಕಾಡಿ ಡೊರ್ಕೋವಿಚ್ ಅವರು ಟಾರ್ಚ್‌ನ್ನು ಮೋದಿಗೆ ಹಸ್ತಾಂತರಿಸಿರೆ, ಅವರು ಅದನ್ನು ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರಿಗೆ ನೀಡಿದರು. ಇದೇ ಮೊದಲ ಬಾರಿ ಒಲಿಂಪಿಯಾಡ್‌ನಲ್ಲಿ ಟಾರ್ಚ್ ರಿಲೇ ನಡೆಸಲಾಗುತ್ತಿದ್ದು, 40 ದಿನಗಳ ಕಾಲ 75 ನಗರಗಳಲ್ಲಿ ಸಂಚರಿಸಲಿದೆ.
44ನೇ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟವು ಚೆನ್ನೈನಲ್ಲಿ ಮುಂಬರುವ ಜುಲೈ 28ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ. ರಾಷ್ಟ್ರರಾಜಧಾನಿ ನವದೆಹಲಿಯಿಂದ ಆರಂಭವಾದ ಟಾರ್ಚ್ ರಿಲೇ ದೇಶದ ಸುಮಾರು 75 ನಗರಗಳಲ್ಲಿ ಸಂಚರಿಸಿ ಜುಲೈ 27ರಂದು ತಮಿಳುನಾಡಿನ ಮಹಾಬಲಿಪುರಂಗೆ ತಲುಪಲಿದೆ. ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ಲೇಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೂಪಾಲ್, ಪಾಟ್ನಾ, ಕೋಲ್ಕತಾ, ಹೈದರಾಬಾದ್, ಬೆಂಗಳೂರು, ತ್ರಿಶೂರ್, ಪೋರ್ಟ್‌ಬ್ಲೇರ್, ಕನ್ಯಾಕುಮಾರಿ ಸೇರಿದಂತೆ 75 ನಗರಗಳಲ್ಲಿ ಸಂಚರಿಸಲಿದೆ.
ಪ್ರೊ ಲೀಗ್ ಹಾಕಿ: ಭಾರತ ತಂಡಗಳಿಗೆ ಸೋಲು
ಆಮ್ಸ್‌ಟೆರ್ಡಮ್(ಜೂ.20): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷ ಪುರುಷ ಹಾಗೂ ಮಹಿಳಾ ತಂಡಗಳು ಭಾನುವಾರ ಕ್ರಮವಾಗಿ ನೆದರ್ಲೆಂಡ್ಸ್ ಹಾಗೂ ಅರ್ಜೇಂಟೀನಾ ವಿರುದ್ದ ಸೋಲನನ್ನುಭವಿಸಿತು. ಶನಿವಾರ ನಡೆದಿದ್ದ ಮೊದಲ ಪಂದ್ತದಲ್ಲಿ ಶೂಟೌಟ್‌ನಲ್ಲಿ 1-4 ಗೋಲುಗಳಿಂದ ಸೋತಿದ್ದ ಪುರುಷರ ಹಾಕಿ ತಂಡವು ಈ ಬಾರಿ ಎರಡನೇ ಪಂದ್ಯದಲ್ಲಿ 1-2 ಗೋಲುಗಳಿಂದ ಪರಾಭವಗೊಂಡಿತು.
ಇನ್ನು, ಶನಿವಾರ ಮೊದಲ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೇಂಟೀನಾವನ್ನು ಮಣಿಸಿದ್ದ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ಸೋಲಿನ ಶಾಕ್ ಎದುರಿಸಿತು. ಭಾರತ ಮಹಿಳಾ ಹಾಕಿ ತಂಡವು 2-3 ಗೋಲುಗಳ ಅಂತರದಿಂದ ಸೋಲು ಅನುಭವಿಸಿತು. ಸದ್ಯ ಭಾರತ ಪುರುಷರ ಹಾಕಿ ತಂಡವು ಅಂಕಪಟ್ಟಿಯಲ್ಲಿ 30 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಭಾರತ ಮಹಿಳಾ ಹಾಕಿ ತಂಡವು 24 ಅಂಕಗಳನ್ನು ಸಂಪಾದಿಸಿ ಮೂರನೇ ಸ್ಥಾನದಲ್ಲೇ ಮುಂದುವರೆದಿದೆ. ಇನ್ನು ಜೂನ್ 21ರಂದು ಭಾರತ ಮಹಿಳಾ ಹಾಕಿ ತಂಡವು ಅಮೆರಿಕ ವಿರುದ್ದ ಸೆಣಸಾಡಲಿದೆ. ಮರುದಿನ ಅಂದರೆ ಜೂನ್ 22ರಂದು ಭಾರತ ಪುರುಷರ ಹಾಕಿ ತಂಡವು ಅಮೆರಿಕ ವಿರುದ್ದ ಕಾದಾಡಲಿದೆ.
Neeraj Chopra ಭಾರತದ ಪುರುಷ ಕ್ರಶ್ ಹೌದಾ? ಚಿನ್ನದ ಹುಡುಗನ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!
ಕಿರಿಯರ ಏಷ್ಯನ್ ಸ್ಕ್ವಾಶ್: ಭಾರತದ ಅನಾಹತ್‌ಗೆ ಚಿನ್ನ
ನವದೆಹಲಿ: ಭಾರತದ ಅನಾಹತ್ ಸಿಂಗ್ ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಅಂಡರ್-15 ಏಷ್ಯನ್ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಭಾನುವಾರ 14 ವರ್ಷದ ಅನಾಹತ್ ಹಾಂಕಾಂಗ್‌ನ ಕ್ವೊಂಗ್ ಎನಾ ವಿರುದ್ದ 3-0 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಅನಾಹತ್ ಸಿಂಗ್ ಈ ಟೂರ್ನಿಯಲ್ಲಿ ಯಾವುದೇ ಗೇಮ್ ಸೋಲದೇ ಫೈನಲ್ ಪ್ರವೇಶಿಸಿದ್ದರು.