Asianet Suvarna News Asianet Suvarna News

ನಮ್ಮ ಸರ್ಕಾರ ಕ್ರೀಡಾಳುಗಳ ಪರವಾಗಿದೆ: ಪ್ರಧಾನಿ ನರೇಂದ್ರ ಮೋದಿ

ಚೀನಾದ ಹಾಂಗ್‌ಝೋನಲ್ಲಿ ಕಳೆದ ವಾರ ಮುಕ್ತಾಯಗೊಂಡ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತೀಯ ಕ್ರೀಡಾಪಟುಗಳ ಜೊತೆ ಬುಧವಾರ ಸಂವಾದ ನಡೆಸಿದ ಮೋದಿ, ಸರ್ಕಾರವು ಕ್ರೀಡಾಪಟುಗಳಿಗೆ ಉತ್ಕೃಷ್ಟ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

PM Narendra Modi interacts with contingent of Asian Para Games 2023 kvn
Author
First Published Nov 2, 2023, 9:42 AM IST

ನವದೆಹಲಿ(ನ.02): ದೇಶವು ಬದಲಾವಣೆ ಕಾಣುತ್ತಿದ್ದು, ಕ್ರೀಡಾಪಟುಗಳ ಪರವಾಗಿರುವ ನಮ್ಮ ಸರ್ಕಾರ ಅವರ ಸಾಧನೆಯ ಹಾದಿಯಲ್ಲಿರುವ ಎಲ್ಲಾ ಅಡೆ ತಡೆಗಳನ್ನು ದೂರವಾಗಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಚೀನಾದ ಹಾಂಗ್‌ಝೋನಲ್ಲಿ ಕಳೆದ ವಾರ ಮುಕ್ತಾಯಗೊಂಡ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತೀಯ ಕ್ರೀಡಾಪಟುಗಳ ಜೊತೆ ಬುಧವಾರ ಸಂವಾದ ನಡೆಸಿದ ಮೋದಿ, ಸರ್ಕಾರವು ಕ್ರೀಡಾಪಟುಗಳಿಗೆ ಉತ್ಕೃಷ್ಟ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

‘ಈ ಹಿಂದೆ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿತ್ತು. ಆದರೀಗ ನಾವು ಪ್ರತಿಯೊಬ್ಬ ಕ್ರೀಡಾಪಟುವಿನ ಮೇಲೆ 4-5 ಕೋಟಿ ರು. ಖರ್ಚು ಮಾಡುತ್ತಿದ್ದೇವೆ. ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿರುವ ಅಡೆ ತಡೆಗಳನ್ನು ದೂರವಾಗಿಸುತ್ತಿದ್ದೇವೆ’ ಎಂದರು. ಈ ಕಾರ್ಯಕ್ರಮದಲ್ಲಿ ಪದಕ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿದ ಮೋದಿ, 2024ರ ಪ್ಯಾರಾಲಿಂಪಿಕ್ಸ್‌ನಲ್ಲೂ ಯಶಸ್ಸು ಸಾಧಿಸುವಂತೆ ಹಾರೈಸಿದರು.

ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ, ಪಾಕಿಸ್ತಾನಕ್ಕಿದೆಯಾ ಸೆಮಿಫೈನಲ್ ಚಾನ್ಸ್?

ರಾಷ್ಟ್ರೀಯ ಗೇಮ್ಸ್‌: ರಾಜ್ಯ ಟೆನಿಸ್‌ ತಂಡಕ್ಕೆ ಚಿನ್ನ!

ಗೋವಾ: ರಾಜ್ಯೋತ್ಸವದಂದು 37ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ 3 ಚಿನ್ನ ಸೇರಿ ಒಟ್ಟು 6 ಪದಕ ಜಯಿಸಿತು. ರಾಜ್ಯವು 17 ಚಿನ್ನ, ತಲಾ 12 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 41 ಪದಕ ಗೆದ್ದಿದ್ದು, ಪದಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

ಬುಧವಾರ ಟೆನಿಸ್‌ ಪುರುಷರ ತಂಡ ವಿಭಾಗದ ಫೈನಲ್‌ನಲ್ಲಿ ಕರ್ನಾಟಕ 2-1 ಅಂತರದಲ್ಲಿ ತಮಿಳುನಾಡು ವಿರುದ್ಧ ರೋಚಕ ಗೆಲುವು ಸಾಧಿಸಿತು. ಸಿಂಗಲ್ಸ್‌ನಲ್ಲಿ ಗೆದ್ದ ಪ್ರಜ್ವಲ್‌ ದೇವ್‌, ಡಬಲ್ಸ್‌ನಲ್ಲಿ ಆದಿಲ್‌ ಕಲ್ಯಾಣ್‌ಪುರ್‌ ಜೊತೆಗೂಡಿ ಮತ್ತೊಂದು ಗೆಲುವು ದಾಖಲಿಸಿದರು.

ಐಸಿಸಿ ಜೊತೆ ಚರ್ಚಿಸಿ ಮಹತ್ವದ ನಿರ್ಧಾರ, ದೆಹಲಿ-ಮುಂಬೈ ಪಂದ್ಯಕ್ಕೆ ಬಿಸಿಸಿಐ ಪ್ರತ್ಯೇಕ ನಿಯಮ!

ಇನ್ನು ರಾಜ್ಯದ ಈಜುಪಟುಗಳ ಪ್ರಾಬಲ್ಯ ಮುಂದುವರಿದಿದ್ದು, ಬುಧವಾರ 2 ಚಿನ್ನ, 2 ಬೆಳ್ಳಿ, 1 ಕಂಚು ಜಯಿಸಿದರು. ಪುರುಷ ಹಾಗೂ ಮಹಿಳಾ ವಿಭಾಗದ 4X200 ಮೀ. ಫ್ರೀಸ್ಟೈಲ್‌ನಲ್ಲಿ ರಾಜ್ಯ ತಂಡ ಬಂಗಾರ ಬಾಚಿಕೊಂಡಿತು. ಮಹಿಳೆಯರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಹಾಶಿಕಾ, ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಿನ್ಯೇಶಾ ರಜತ ಪದಕ ಪಡೆದರೆ, ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿದಿತ್‌ ಕಂಚು ಗೆದ್ದರು.

ಶ್ರಿಯಾಂಕಾ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ

ಚಾಂಗ್ವೊನ್‌(ದ.ಕೊರಿಯಾ): ಭಾರತದ ತಾರಾ ಶೂಟರ್‌ ಶ್ರಿಯಾಂಕಾ ಸದಂಗಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ನಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಶ್ರಿಯಾಂಕಾ ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಶ್ರಿಯಾಂಕಾ 440.5 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕೂಟದಲ್ಲಿ ಅವರು ಪದಕ ವಂಚಿತರಾದರೂ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾದರು. ಇದು ಭಾರತಕ್ಕೆ ಶೂಟಿಂಗ್‌ನಲ್ಲಿ ಲಭಿಸಿದ 13ನೇ ಪ್ಯಾರಿಸ್‌ ಒಲಿಂಪಿಕ್ಸ್ ಕೋಟಾ. ಈ ಬಾರಿ ಏಷ್ಯನ್‌ ಕೂಟದಲ್ಲಿ ಶ್ರಿಯಾಂಕಾಗೂ ಮೊದಲು ಇತರ ಐವರು ಕೂಡಾ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

Follow Us:
Download App:
  • android
  • ios