Asianet Suvarna News Asianet Suvarna News

ಜನಮೆಚ್ಚಿದ ನಾಯಕರ ಸಮೀಕ್ಷೆ; ನಂ.1 ಮೋದಿ, ನಂತ್ರ ಧೋನಿ!


ವಿಶ್ವದ 41 ದೇಶಗಳಲ್ಲಿ ಜನಮೆಚ್ಚಿದ ನಾಯಕ, ಸೆಲೆಬ್ರೆಟಿ ಯಾರು ಎಂದು ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದರೆ, ಮಾಜಿ ನಾಯಕ ಎಂ.ಎಸ್.ಧೋನಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಸಮೀಕ್ಷೆ ಸಂಪೂರ್ಣ ವಿವರ ಇಲ್ಲಿದೆ.

PM Narendra modi and cricketer ms dhoni toppers in most admired man survey
Author
Bengaluru, First Published Sep 25, 2019, 6:45 PM IST

ನವದೆಹಲಿ(ಸೆ.25): ವಿಶ್ವ ನಾಯಕರ ಪೈಕಿ ಜನಮೆಚ್ಚಿನ ನಾಯಕರು ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆಯ  ಯುಗೌ ಸಂಸ್ಥೆ 41 ದೇಶದ 42,000 ಮಂದಿಯನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಭಾರತೀಯರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದಿದ್ದರೆ, ಎಂ.ಎಸ್.ಧೋನಿ 2ನೇ ಸ್ಥಾನದಲ್ಲಿದ್ದಾರೆ. 

ಇದನ್ನೂ ಓದಿ: ಧೋನಿ ನಿವೃತ್ತಿ ಒತ್ತಡ; ಯುವರಾಜ್ ಸಿಂಗ್ ಪ್ರತಿಕ್ರಿಯೆಗೆ ಎಲ್ಲರೂ ಗಪ್‌ಚುಪ್!

ಭಾರತದ ಜನಮೆಚ್ಚಿದ ನಾಯಕರ ಪೈಕಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದಿದ್ದಾರೆ.  ಮೋದಿ 15.66% ಮತಗಳನ್ನು ಪಡೆದಿದ್ದಾರೆ.  ವಿಶ್ವದ ಜನ ಮೆಚ್ಚಿದ ಪುರುಷ ಸೆಲೆಬ್ರೆಟಿ ಪೈಕಿ ಉದ್ಯಮಿ ಬಿಲ್‌ಗೇಟ್ಸ್ ಮೊದಲ ಸ್ಥಾನದಲ್ಲಿದ್ದರೆ, ಮಹಿಳಾ ವಿಭಾಗದಲ್ಲಿ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮೆಶೆಲ್ ಒಬಾಮ ಮೊದಲ ಸ್ಥಾನ ಪಡೆದಿದ್ದಾರೆ. 

ಇದನ್ನೂ ಓದಿ: ಕೈಗೆ ಸಿಗುತ್ತಿಲ್ಲ ಧೋನಿ; ಜಾರ್ಖಂಡ್ ತಂಡಕ್ಕೆ ಹೊಸ ನಾಯಕ

ಭಾರತೀಯ ಕ್ರೀಡಾ ವಿಭಾದಲ್ಲಿ ಎಂ.ಎಸ್.ಧೋನಿ 8.58% ಮತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದ ಕ್ರೀಡಾಪಟುಗಳ ಪೈಕಿ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಅಗ್ರಸ್ಥಾನ ಪಡೆದಿದ್ದಾರೆ. ಇನ್ನು ಸಚಿನ್ ತೆಂಡುಲ್ಕರ್ (5.81%), ವಿರಾಟ್ ಕೊಹ್ಲಿ(4.46%) ನಂತರದ ಸ್ಥಾನದಲ್ಲಿದ್ದಾರೆ. 

ಇದನ್ನೂ ಓದಿ: ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?

ಮಹಿಳಾ ವಿಭಾಗದಲ್ಲಿ ಬಾಕ್ಸರ್ ಮೇರಿ ಕೋಮ್ (10.36%) ಮೊದಲ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದರೆ ಟಾಪ್ 25 ಮಹಿಳಾ ಸೆಲೆಬ್ರೆಟಿಗಳ ಪೈಕಿ ಸ್ಥಾನ ಪಡೆದ ಏಕೈಕ ಕ್ರೀಡಾಪಟು ಮೇರಿ ಕೋಮ್. ಇನ್ನು ಕಿರಣ್ ಬೇಡಿ, ಲತಾ ಮಂಗೇಶ್ಕರ್, ಸುಷ್ಮಾ ಸ್ವರಾಜ್ ಹಾಗೂ ದೀಪಿಕಾ ಪಡುಕೋಣೆ ಟಾಪ್ 5 ಸ್ಥಾನದಲ್ಲಿದ್ದಾರೆ. 

Follow Us:
Download App:
  • android
  • ios