ಪ್ಲಂಕೆಟ್ ದಾಳಿಗೆ ಸಾಧಾರಣ ಮೊತ್ತಕ್ಕೆ ಕುಸಿದ ಪಂಜಾಬ್
ಗೇಲ್ ಅನುಪಸ್ಥಿತಿಯಲ್ಲಿ ರಾಹುಲ್ ಅವರೊಂದಿಗೆ ಫಿಂಚ್ ಇನಿಂಗ್ಸ್ ಆರಂಭಿಸಿದರಾದರೂ ಕೇವಲ 2 ರನ್ ಗಳಿಸಿ ಔಟಾದರು. ರಾಹುಲ್ ಕೂಡ ಹೆಚ್ಚು ಹೊತ್ತು ನಿಲ್ಲದೆ 23(15) ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.
ನವದೆಹಲಿ(ಏ.23): ಸತತ 2 ಗೆಲುವುಗಳನ್ನು ಗೆದ್ದಿರುವ ಪಂಜಾಬ್ ತಂಡ 6ನೇ ಪಂದ್ಯದಲ್ಲಿ ವೇಗದ ಬೌಲರ್ ಪ್ಲಂಕೆಟ್ ದಾಳಿಗೆ ಸಾಧಾರಣ ಮೊತ್ತಕ್ಕೆ ಕುಸಿದು ಡೆಲ್ಲಿ ಡೇರ್ ಡೇವಿಲ್ಸ್'ಗೆ 144 ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಡೆಲ್ಲಿ ಡೇರ್'ಡೇವಿಲ್ಸ್ ತಂಡ ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಗೇಲ್ ಅನುಪಸ್ಥಿತಿಯಲ್ಲಿ ರಾಹುಲ್ ಅವರೊಂದಿಗೆ ಫಿಂಚ್ ಇನಿಂಗ್ಸ್ ಆರಂಭಿಸಿದರಾದರೂ ಕೇವಲ 2 ರನ್ ಗಳಿಸಿ ಔಟಾದರು. ರಾಹುಲ್ ಕೂಡ ಹೆಚ್ಚು ಹೊತ್ತು ನಿಲ್ಲದೆ 23(15) ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.
ಕರ್ನಾಟಕ ಬ್ಯಾಟ್ಸ್'ಮೆನ್'ಗಳಾದ ಮಾಯಾಂಕ್(21), ಕರುಣ್ ನಾಯರ್ (34) ಹಾಗೂ ಡೇವಿಡ್ ಮಿಲ್ಲರ್(26) ಆಟ ಮಾತ್ರ ಕೆಲ ಕಾಲ ಮಿಂಚಿಳಿಸಿತು. ಪಂಜಾಬ್ ಪರ ಯಾವೊಬ್ಬ ಬ್ಯಾಟ್ಸ್'ಮೆನ್ ಕೂಡ ಸ್ಫೋಟಕ ಆಟವಾಡಲಿಲ್ಲ. ಕೊನೆಯದಾಗಿ 20 ಓವರ್'ಗಳಲ್ಲಿ 143/8 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಡೆಲ್ಲಿ ಪರ ಪ್ಲಂಕೆಟ್ 17/3, ಬೋಲ್ಟ್ 21/2, ಅವೇಶ್ ಖಾನ್ 36/2 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.
ಸ್ಕೋರ್
ಪಂಜಾಬ್ 20 ಓವರ್'ಗಳಲ್ಲಿ 143/8
(ನಾಯರ್ 34, ಮಿಲ್ಲರ್ 26, ಪ್ಲಂಕೆಟ್ 17/3)
ಡೆಲ್ಲಿ ವಿರುದ್ಧದ ಪಂದ್ಯ
(ವಿವರ ಅಪೂರ್ಣ)