ಪಾಟ್ನಾ[ಆ.08]: ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು 26-47 ಆಂಕಗಳ ಅಂತರದಿಂದ ಮಣಿಸಿದ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಟೈಟಾನ್ಸ್ ಮತ್ತೊಮ್ಮೆ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.

ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಏಳನೇ ಆವೃತ್ತಿಯ 31ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. ಮೊದಲಾರ್ಧದ 10ನೇ ನಿಮಿಷದಲ್ಲಿ ಬುಲ್ಸ್ 10-8 ಮುನ್ನಡೆ ಕಾಯ್ದುಕೊಂಡಿತ್ತು. ಇದೇ ಮುನ್ನಡೆ ಕಾಯ್ದುಕೊಂಡ ಬುಲ್ಸ್ ಪಡೆ ಮೊದಲಾರ್ಧ ಮುಕ್ತಾಯದ ವೇಳೆಗೆ 21-14 ಅಂಕ ಗಳಿಸಿತ್ತು. 

PKL7:ಸೋಲಿನಿಂದ ಕಂಗೆಟ್ಟಿದ್ದ ಹರ್ಯಾಣಕ್ಕೆ ಗೆಲುವಿನ ಸಿಂಚನ!

ಇನ್ನು ದ್ವಿತಿಯಾರ್ಧಲ್ಲೂ ಟೖಟಾನ್ಸ್ ಪಡೆಗೆ ಕಮ್’ಬ್ಯಾಕ್ ಮಾಡಲು ಬುಲ್ಸ್ ಪಡೆ ಬಿಡಲಿಲ್ಲ. ಬರೋಬ್ಬರಿ 4 ಬಾರಿ ಟೈಟಾನ್ಸ್ ಪಡೆಯನ್ನು ಆಲೌಟ್ ಮಾಡುವ ಮೂಲಕ ರೇಡಿಂಗ್ ಹಾಗೂ ಡಿಫೆನ್ಸ್’ನಲ್ಲಿ ಚಾಂಪಿಯನ್ ಗತ್ತಿಗೆ ತಕ್ಕಂತೆ ರೋಹಿತ್ ಪಡೆ ಪ್ರದರ್ಶನ ತೋರಿತು. 

ಬುಲ್ಸ್ ಪರ ಪವಾನ್ ಶೆರಾವತ್ 17 ಅಂಕ ಪಡೆದು ಮಿಂಚಿದರೆ, ನಾಯಕ ರೋಹಿತ್ 8, ಮಹೇಂದ್ರ ಸಿಂಗ್ 7 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಟೈಟಾನ್ಸ್ ಪರ ಸಿದ್ದಾರ್ಥ್ ದೇಸಾಯಿ 11 ಅಂಕ ಪಡೆದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
  

ಪವನ್ ಶೆರಾವತ್ 400 ಅಂಕ : ಬೆಂಗಳೂರು ಬುಲ್ಸ್ ಸೂಪರ್ ರೈಡ್ ನಡೆಸುವುದರೊಂದಿಗೆ 400 ರೇಡ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು. ಕಳೆದ ಆವೃತ್ತಿಯಲ್ಲಿ ಸ್ಟಾರ್ ಆಟಗಾರರಾಗಿ ಹೊರಹೊಮ್ಮಿದ್ದ ಪವನ್ ಶೆರಾವತ್ ತೆಲುಗು ವಿರುದ್ಧವೂ ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.