ನಷ್ಟ ಪರಿಹಾರಕ್ಕಾಗಿ ಬಿಸಿಸಿಐ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ದೂರು ದಾಖಲಿಸುವುದಾಗಿ ಪಿಸಿಬಿ ತಿಳಿಸಿದೆ.
ಕರಾಚಿ(ಸೆ.30): ಭಾರತ ದ್ವಿಪಕ್ಷೀಯ ಸರಣಿಗಳನ್ನು ಆಡದ ಕಾರಣ ತನಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಹಾಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹ 456.99 ಕೋಟಿ ಪರಿಹಾರ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಗ್ರಹಿಸಿದೆ.
ನಷ್ಟ ಪರಿಹಾರಕ್ಕಾಗಿ ಬಿಸಿಸಿಐ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ದೂರು ದಾಖಲಿಸುವುದಾಗಿ ಪಿಸಿಬಿ ತಿಳಿಸಿದೆ.
‘2014ರಲ್ಲಿ ಬಿಸಿಸಿಐ ದ್ವಿಪಕ್ಷೀಯ ಸರಣಿ ಆಡುವುದಾಗಿ ಪಿಸಿಬಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಭಾರತ 2015ರಿಂದ 2023ರ ಅವಧಿಯಲ್ಲಿ ಪಾಕ್ ನೆಲದಲ್ಲಿ 6 ಕ್ರಿಕೆಟ್ ಸರಣಿಗಳನ್ನು ಆಡಬೇಕಿದ್ದು, ಒಂದೂ ಸರಣಿಯನ್ನು ಆಡಿಲ್ಲ. ಇದರಿಂದ ನಮಗೆ ಕೋಟ್ಯಂತರ ರು. ನಷ್ಟ ಉಂಟಾಗಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಭಾರತ, ಪಾಕ್ ವಿರುದ್ಧ ಪಂದ್ಯಗಳನ್ನು ಆಡುತ್ತಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ’ ಎಂದು ಪಿಸಿಬಿ ಅಧ್ಯಕ್ಷ ನಜಾಮ್ ಸೇಥಿ ದೂರಿದ್ದಾರೆ.
