ಇಸ್ಲಾಮಾಬಾದ್(ಏ.29): ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಪಾಕಿಸ್ತಾನ ತಂಡ ಈಗಾಗಲೇ ಆಂಗ್ಲರ ನಾಡಿಗೆ ಕಾಲಿಟ್ಟಿದೆ. ತಂಡದ ಹಿರಿಯ ಆಟಗಾರ ಶೋಯಿಬ್ ಮಲ್ಲಿಕ್ ಇದೀಗ ದಿಢೀರ್ ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಮಲ್ಲಿಕ್ ವೈಯುಕ್ತಿ ಸಮಸ್ಯೆ ಬಗೆಹರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ 10 ದಿನದ ರಜೆ ನೀಡಲಾಗಿದೆ. ಹೀಗಾಗಿ ಮಲ್ಲಿಕ್ ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಸ್ಟಾರ್ ಕ್ರಿಕೆಟಿಗ ಔಟ್..!

ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟಿಸಲಾಗಿದೆ. ತಂಡದಲ್ಲಿ ಶೋಯಿಬ್ ಮಲ್ಲಿಕ್ ಕೂಡ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ದ್ವಿಪಕ್ಷೀಯ ಸರಣಿ ನಡೆಯಲಿದೆ. ಆದರೆ ಮಲ್ಲಿಕ್ ವೈಯುಕ್ತಿಕ ಸಮಸ್ಯೆ ತಂಡದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಬಾರದು. ಹೀಗಾಗಿ ಮಲ್ಲಿಕ್‌ಗೆ 10 ದಿನದ ರಜೆ ನೀಡಲಾಗಿದೆ ಎಂದು ಪಿಸಿಬಿ ಟ್ವೀಟ್ ಮಾಡಿದೆ.

 

 

ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್‌: ಭಾರತದಿಂದ ಒಬ್ಬರೇ ಅಂಪೈರ್‌!

10 ದಿನದ ರಜೆ ಬಳಿಕ ಶೋಯಿಬ್ ಮಲ್ಲಿಕ್ ತಂಡ ಸೇರಿಕೊಳ್ಳಲಿದ್ದಾರೆ. ಮಲ್ಲಿಕ್ ವೈಯುಕ್ತಿ ವಿಚಾರವನ್ನು ಚರ್ಚಿಸುವುದಿಲ್ಲ. ಇಷ್ಟೇ ಅಲ್ಲ ಈ ಕುರಿತು ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸಿವುದಿಲ್ಲ ಎಂದು ಟ್ವೀಟ್ ಮಾಡಿದೆ. ಪಿಸಿಬಿ ಟ್ವೀಟ್ ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.