ದುಬೈ[ಏ.27] : ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮ್ಯಾಚ್‌ ರೆಫ್ರಿ ಹಾಗೂ ಅಂಪೈರ್‌ಗಳ ಪಟ್ಟಿಯನ್ನು ಶುಕ್ರವಾರ ಐಸಿಸಿ ಪ್ರಕಟಿಸಿದೆ. 22 ಪಂದ್ಯ ಅಧಿಕಾರಿಗಳ ಪೈಕಿ 6 ಮ್ಯಾಚ್‌ ರೆಫ್ರಿಗಳು ಹಾಗೂ 16 ಅಂಪೈರ್‌ಗಳು ಇದ್ದಾರೆ. ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿರುವ ಭಾರತದ ಏಕೈಕ ಅಂಪೈರ್‌ ಸುಂದರಮ್‌ ರವಿ.

ರವಿ ಇತ್ತೀಚೆಗೆ ಆರ್‌ಸಿಬಿ-ಮುಂಬೈ ಐಪಿಎಲ್‌ ಪಂದ್ಯದ ವೇಳೆ ಲಸಿತ್‌ ಮಾಲಿಂಗ ಎಸೆದ ನೋಬಾಲ್‌ ಗಮನಿಸದೆ ವಿವಾದಕ್ಕೆ ಗುರಿಯಾಗಿದ್ದರು. ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಅಂಪೈರ್‌ ರವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತದ ಜಾವಗಲ್‌ ಶ್ರೀನಾಥ್‌ ಐಸಿಸಿ ಮ್ಯಾಚ್‌ ರೆಫ್ರಿಯಾಗಿದ್ದರೂ, ಅವರಿಗೆ ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿಲ್ಲ. ಶ್ರೀನಾಥ್‌ ದ್ವಿಪಕ್ಷೀಯ ಸರಣಿಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿದ್ದು, ಐಸಿಸಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಮ್ಯಾಚ್‌ ರೆಫ್ರಿ: ಡೇವಿಡ್‌ ಬೂನ್‌, ಕ್ರಿಸ್‌ ಬ್ರಾಡ್‌, ಆ್ಯಂಡಿ ಪೈಕ್ರಾಫ್ಟ್‌, ಜೆಫ್‌ ಕ್ರೊವ್‌, ರಂಜನ್‌ ಮದುಗಲೆ, ರಿಚ್ಚಿ ರಿಚರ್ಡ್‌ಸನ್‌.

ಅಂಪೈರ್‌: ಎಸ್‌.ರವಿ, ಅಲೀಂ ದಾರ್‌, ಕುಮಾರ್‌ ಧರ್ಮಸೇನಾ, ಮಾರಾಯಸ್‌ ಎರಾಸ್ಮಸ್‌, ಕ್ರಿಸ್‌ ಗ್ರಾಫಾನಿ, ಇಯಾನ್‌ ಗೌಲ್ಡ್‌, ರಿಚರ್ಡ್‌ ಇಲ್ಲಿಂಗ್‌ವತ್‌ರ್‍, ರಿಚರ್ಡ್‌ ಕೆಟ್ಟಲ್‌ಬೊರೊಗ್‌, ನೈಜಲ್‌ ಲಾಂಗ್‌, ಬ್ರೂಸ್‌ ಆಕ್ಸೆನ್‌ಫೋರ್ಡ್‌, ಪಾಲ್‌ ರೈಫಲ್‌, ರಾಡ್‌ ಟಕರ್‌, ಜೋಲ್‌ ವಿಲ್ಸನ್‌, ಮೈಕಲ್‌ ಗಫ್‌, ರುಚಿರಾ ಪಲಿಯಗುರುಗೆ, ಪಾಲ್‌ ವಿಲ್ಸನ್‌.