Pro Kabaddi League: ಬುಲ್ಸ್ ತಂಡದಲ್ಲೇ ಉಳಿದ ಬೆಂಕಿ ಭರತ್..! ಪವನ್‌, ವಿಕಾಸ್, ಫಜಲ್ ಹರಾಜಿಗೆ..!

10ನೇ ಆವೃತ್ತಿಯ  ಪ್ರೊ ಕಬಡ್ಡಿ ಲೀಗ್ ಹರಾಜಿಗೂ ಮುನ್ನ 84 ಆಟಗಾರರು ರೀಟೈನ್‌
ಐವರು ಆಟಗಾರರನ್ನು ರೀಟೈನ್ ಮಾಡಿಕೊಂಡ ಬೆಂಗಳೂರು ಬುಲ್ಸ್
ಪವನ್ ಶೆರಾವತ್, ವಿಕಾಸ್ ಕಂಡೋಲಾ ಹರಾಜಿನಲ್ಲಿ ಭಾಗಿ

Pawan Sehrawat and Vikash Kandola up for grabs at Pro Kabaddi Season 10 Player Auction kvn

ನವದೆಹಲಿ(ಆ.08): 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿಗೂ ಮುನ್ನ ಎಲ್ಲಾ 12 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಅಂತಿಮಗೊಳಿಸಿದ್ದು, ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್ ತಂಡವು ತನ್ನ ತಾರಾ ರೈಡರ್‌ಗಳಾದ ಭರತ್ ಹೂಡಾ, ನೀರಜ್‌ ಸೇರಿದಂತೆ ಐವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಬೆಂಗಳೂರು ಬುಲ್ಸ್ ತಂಡವು ಸೌರಭ್ ನಂದಲ್‌, ಅಮನ್, ಯಶ್ ಹೂಡಾ ಅವರನ್ನು ಸಹ ರೀಟೈನ್ ಮಾಡಿಕೊಂಡಿದೆ. ಆದರೆ ನಾಯಕ ವಿಕಾಸ್ ಕಂಡೋಲಾ ಹಾಗೂ ಸ್ಟಾರ್ ಡಿಫೆಂಡರ್ ಮಹೇಂದರ್‌ರನ್ನು ತಂಡ ಕೈಬಿಟ್ಟಿದೆ.

12 ತಂಡಗಳು ಹರಾಜಿಗೂ ಮುನ್ನ ಒಟ್ಟಾರೆ 84 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ರಾಜ್ಯದ ಯಾವೊಬ್ಬ ಆಟಗಾರರನ್ನು ಪ್ರೊ ಕಬಡ್ಡಿ ಲೀಗ್ ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿಲ್ಲ. ಮುಂಬರುವ ಸೆಪ್ಟೆಂಬರ್ 08 ಹಾಗೂ 09ರಂದು ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ನಡೆಯಲಿದೆ.

ಪವನ್‌, ವಿಕಾಸ್‌, ಫಜಲ್‌ ಹರಾಜಿಗೆ..!

ಕಳೆದ ಆವೃತ್ತಿಯಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದ ಅಗ್ರ 3 ಕಬಡ್ಡಿ ಆಟಗಾರರಾದ ಪವನ್ ಶೆರಾವತ್, ವಿಕಾಸ್ ಕಂಡೋಲಾ ಹಾಗೂ ಫಜಲ್ ಅಟ್ರಾಚಲಿ ಸೇರಿದಂತೆ ಪ್ರಮುಖರು ಈ ಬಾರಿ ರೀಟೈನ್ ಆಗಿಲ್ಲ. ಬೆಂಗಳೂರು ತಂಡದಲ್ಲಿದ್ದ ಪವನ್ ಕುಮಾರ್ ಶೆರಾವತ್ ಅವರನ್ನು 2022ರ ಹರಾಜಿನಲ್ಲಿ ತಮಿಳ್ ತಲೈವಾಸ್ 2.26 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದು ಟೂರ್ನಿಯ ಇರಿಹಾಸದಲ್ಲೇ ದುಬಾರಿ ಖರೀದಿ ಎನಿಸಿತ್ತು. ಆದರೆ ಮೊದಲ ಪಂದ್ಯದಲ್ಲೇ ಪವನ್ ಗಾಯಗೊಂಡು ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದ್ದರು. ಇದೀಗ ಪವನ್ ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದು, ಕಳೆದ ಬಾರಿಯಂತೆ ಈ ಬಾರಿಯ ಹರಾಜಿನಲ್ಲಿಯೂ ದೊಡ್ಡ ಮೊತ್ತ ಪಡೆಯಲಿದ್ದಾರೆಯೇ ಎನ್ನುವ ಕುತೂಹಲವಿದೆ.

ಏಷ್ಯನ್ ಹಾಕಿ ಚಾಂಪಿಯನ್‌ಶಿಪ್: ಕೊರಿಯಾ ವಿರುದ್ದ ಗೆದ್ದು ಸೆಮೀಸ್‌ಗೇರಿದ ಭಾರತ

ಚೆನ್ನೈ: 7ನೇ ಆವೃತ್ತಿಯ ಪುರುಷರ ಏಷ್ಯನ್‌ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ 3 ಬಾರಿ ಚಾಂಪಿಯನ್‌ ಭಾರತ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಸೋಮವಾರ ದಕ್ಷಿಣ ಕೊರಿಯಾ ವಿರುದ್ದ ಭಾರತ 3-2 ಗೋಲುಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ 4 ಪಂದ್ಯಗಳಲ್ಲಿ 3ನೇ ಜಯ ಸಂಪಾದಿಸಿ 10 ಅಂಕ ಪಡೆದ ಭಾರತ, ಅಗ್ರಸ್ಥಾನ ಖಚಿತಪಡಿಸಿಕೊಳ್ಳುವುದರ ಜತೆಗೆ ಸೆಮೀಸ್‌ ಸ್ಥಾನವನ್ನೂ ಖಚಿತಪಡಿಸಿಕೊಂಡಿತು. ಅತ್ತ ಮಲೇಷ್ಯಾ (09 ಅಂಕ), ಕೂಡಾ ಸೆಮೀಸ್‌ಗೇರಿದ್ದು, ಮತ್ತೆರಡು ಸ್ಥಾನಕ್ಕಾಗಿ ದಕ್ಷಿಣ ಕೊರಿಯಾ(05), ಪಾಕಿಸ್ತಾನ (05), ಜಪಾನ್(02) ನಡುವೆ ಪೈಪೋಟಿ ಇದೆ.

ಸರಣಿ ಸೋಲು ತಪ್ಪಿಸಿಕೊಳ್ಳುತ್ತಾ ಟೀಂ ಇಂಡಿಯಾ; ಹಾರ್ದಿಕ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ.!

ಸೋಮವಾರದ ಪಂದ್ಯದಲ್ಲಿ ಭಾರತವೇ ಹೆಚ್ಚಿನ ಪ್ರಾಬಲ್ಯ ಸಾಧಿಸಿತು. 6ನೇ ನಿಮಿಷದಲ್ಲಿ ನೀಲಕಂಠ ಶರ್ಮಾ ಬಾರಿಸಿದ ಆಕರ್ಷಕ ಗೋಲು ಭಾರತಕ್ಕೆ ಮುನ್ನಡೆ ಒದಗಿಸಿತು. ಆದರೆ ಮುಂದಿನ 6 ನಿಮಿಷಗಳಲ್ಲೇ ದಕ್ಷಿಣ ಕೊರಿಯಾ ಸಮಬಲ ಸಾಧಿಸಿತು. 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರೆ, 33ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಬಾರಿಸಿದ ಗೋಲು ತಂಡದ ಗೆಲುವಿನ ಅಂತರ ಹೆಚ್ಚಿಸಿತು. 3 ನಿಮಿಷ ಬಾಕಿ ಇದ್ದಾಗ ಕೊರಿಯಾ 2ನೇ ಗೋಲು ಬಾರಿಸಿದರೂ, ಪಂದ್ಯ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ ರೌಂಡ್ ರಾಬಿನ್‌ ಹಂತದ ತನ್ನ ಕೊನೆ ಪಂದ್ಯದಲ್ಲಿ ಬುಧವಾರ ಪಾಕಿಸ್ತಾನ ವಿರುದ್ದ ಆಡಲಿದೆ. 
 

Latest Videos
Follow Us:
Download App:
  • android
  • ios