ಭಾರತದ ಮಹಿಳಾ ಕ್ರಿಕೆಟರ್ಸ್ ಕಾಣೆಯಾಗಿದ್ದಾರೆ. ಜೂನ್ನಲ್ಲಿ ವಿಶ್ವಕಪ್ ಫೈನಲ್ನಲ್ಲಿ ಸೋತ ನಂತರ ಯಾವ ಟೂರ್ನಿಲ್ಲೂ ಕಾಣಸಿಗದೆ ಮಾಯವಾಗಿದ್ದಾರೆ ದಯವಿಟ್ಟು ಹುಡುಕಿಕೊಡಿ. ಹೀಗಂತ ಹೇಳ್ತಿರೋದು ಭಾರತದ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು. ಅವರು ಹೀಗೆ ಹೇಳುತ್ತಿರುವುದಕ್ಕೂ ಕಾರಣವಿದೆ. ಅದೇನು ಅಂತೀರಾ? ಇಲಲಿದೆ ನೋಡಿ ವಿವರ.
ಜೂನ್ 23, 2017. ಅಂದ್ರೆ ಸರಿಯಾಗಿ 3 ತಂಗಳ ಹಿಂದೆ, ಇಡೀ ಭಾರತವೇ ಹೆಮ್ಮೆ ಪಡುವಂತಹ ದಿನ. ಕಾರಣ ಅಂದು ನಮ್ಮ ದೇಶದ ಹೆಮ್ಮೆಯ ಪುತ್ರಿಯರು ಮಹಿಳಾ ವಿಶ್ವಕಪ್ನಲ್ಲಿ ಫೈನಲ್ಗೇರಿದ್ರು. ಅಂದು ಮಿಥಾಲಿ ಪಡೆ ಫೈನಲ್ನಲ್ಲಿ ಸೋತ್ರೂ ದೇಶದ ಕೀರ್ತಿ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸಿದ್ದರು. ಅಷ್ಟೇ ಅಲ್ಲ ವಿಶ್ವದ ಗಮನ ಸೆಳದಿದ್ದರು.
ಅಂದಿನ ಅವರ ಸಾಧನೆ ಇಡೀ ದೇಶದ ದೃಷ್ಠಿಕೋನವನ್ನೇ ಬದಲಾಯಿಸಿಬಿಟ್ಟಿತ್ತು. ಅಲ್ಲಿವರೆಗೆ ಮಹಿಳಾ ಕ್ರಿಕೆಟ್ ಇದೆ ಎಂಬುದರ ಅರಿವೇ ಇಲ್ಲದಿದ್ದ ಜನ ಮಹಿಳಾ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಿಸಿದ್ರು. ಅಷ್ಟೇ ಯಾಕೆ ಪುರುಷರ ಕ್ರಿಕೆಟ್ನ ಸಮನಾಗೆ ಮಹಿಳಾ ಕ್ರಿಕೆಟ್ನನ್ನ ಕಾಣಲು ಶುರುಮಾಡಿದ್ರು. ಅಂದು ವಿಶ್ವಕಪ್ನಲ್ಲಿ ಆಡಿದ್ದವರು ಸ್ಟಾರ್ಸ್ ಆಗಿಬಿಟ್ಟಿದ್ರು.
ಅಂದು ಸ್ಟಾರಾಗಿ ಮೆರದವರು ಈಗ ಎಲ್ಲಿಹೋದ್ರು: ಕಾಣೆಯಾಗಿದ್ದಾರೆ ಭಾರತದ ಮಹಿಳಾ ಕ್ರಿಕೆಟರ್ಸ್
ವಿಶ್ವಕಪ್ ಕಳೆದು 3 ತಿಂಗಳು ಕಳೆದಿವೆ. ಅಂದು ಸ್ಟಾರ್ಗಳಾಗಿ ಹೆಡ್'ಲೈನ್ಸ್'ನಲ್ಲಿ ರಾರಾಜಿಸಿದ್ದವರು ಇಂದು ಕಾಣೆಯಾಗಿಬಿಟ್ಟಿದ್ದಾರೆ. ಅಲ್ಲಿ ಇಲ್ಲಿ ರಿಯಾಲಿಟಿ ಶೋ ಮತ್ತು ಸಂದರ್ಶನಗಳಲ್ಲಿ ಕಣಿಸಿದ್ದು ಬಿಟ್ರೆ ಇವಱರೂ ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್ ಹಿಡಿದಿದ್ದನ್ನ ನೋಡೇ ಇಲ್ಲ.
ಮಿಥಾಲಿ ಪಡೆ ವಿಶ್ವಕಪ್'ನಲ್ಲಿ ಕಮಾಲ್ ಮಾಡಿದ ನಂತರ ಇಷ್ಟು ದಿನ ಎದುರಿಸಿದ ಸಂಕಷ್ಟಗಳೆಲ್ಲಾ ಅಂತ್ಯವಾಗಲಿದೆ. ಇನ್ನುಮುಂದೆ ಪುರುಷ ಕ್ರಿಕೆಟ್ನಷ್ಟೇ ಮಹಿಳಾ ಕ್ರಿಕೆಟ್ಗೂ ಬೆಲೆ ಸಿಗಲಿದೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಆಗಿದ್ದೇ ಬೇರೆ. ಮತ್ತೆ ಭಾರತದ ಮಹಿಳಾ ಕ್ರಿಕೆಟ್ ಕಾಣೆಯಾಗಿಬಿಡ್ತು. ಯಾವೊಂದು ಟೂರ್ನಿಯಲ್ಲೂ ಯಾವೊಬ್ಬ ಆಟಗಾರ್ತಿಯರು ಕಾಣಸಿಗಲೇ ಇಲ್ಲ.
ಆದ್ರೆ ಮತ್ತೆ ನಮ್ಮ ದೇಶದಲ್ಲಿ ಮಹಿಳಅ ಕ್ರಿಕೆಟ್ ಕಾನೆಯಾಗುವಂತೆ ಮಾಡಿದ್ದು ಬಿಸಿಸಿಐ. ಹೌದು, ದೇಶದಲ್ಲಿ ಉತ್ತಮ ಪ್ರತಿಕ್ರಿಯೇ ಸಿಕ್ಕಿರುವಾಗ ಹೆಚ್ಚು ಹೆಚ್ಚು ವುಮೆನ್ಸ್ ಕ್ರಿಕೆಟ್ ಟೂರ್ನಿಯನ್ನ ನಡೆಸೋದನ್ನ ಬಿಟ್ಟು. ಅದನ್ನ ಸಂಪೂರ್ಣವಾಗಿ ಮರೆತು. ಕೇವಲ ಪುರುಷರ ಕ್ರಿಕೆಟ್ ಟೂರ್ನಿಗಳಲ್ಲಿ ಬಿಸಿಸಿಐ ಬ್ಯುಸಿಯಾಗಿಬಿಟ್ಟಿದೆ. ಅವರ ಈ ನಿರ್ಲಕ್ಷದಿಂದ ಇಂದು ಮಹಿಳಾ ಕ್ರಿಕೆಟ್ ಮತ್ತೆ ಮಾಯಾವಾಗೋ ಹಂತಕ್ಕೆ ಬಂದಿದೆ.
ಮಿಥಾಲಿ ಪಡೆಯ ಮುಂದಿನ ಟೂರ್ನಿಗಾಗಿ ಕಾಯಬೇಕಿದೆ 5 ತಿಂಗಳು: 2018 ಪ್ರೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ
ಭಾರತದ ಕ್ರಿಕೆಟ್ ಪ್ರೇಮಿಗಳು ಮಿಥಾಲಿ ಪಡೆಯನ್ನ ಮತ್ತೆ ಮೈದಾನದಲ್ಲಿ ನೋಡಬೇಕಾದ್ರೆ ಇನ್ನೂ 5 ತಿಂಗಳು ಕಾಯಲೇಬೆಕು. ಕಾರಣ ಅಲ್ಲಿವರೆಗೆ ಟೀಂ ಇಂಡಿಯಾಗೆ ಯಾವುದೇ ಸರಣಿಗಳಿಲ್ಲ. ಫೆಬ್ರವರಿ 5 ರಿಂದ ಮಿಥಾಲಿ ಪಡೆ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನ ಆಡಲಿದೆ.
ಇದನ್ನ ನೋಡುತ್ತಿದ್ದರೆ ಮತ್ತೆ ಭಾರತದಲ್ಲಿ ಮಹಿಳಾ ಕ್ರಿಕೆಟ್ ಮಾಯವಾಗಿಬಿಡುತ್ತೆ ಅನಿಸುತ್ತಿದೆ. ಇದರ ನೇರ ಹೊಣೆ ಮಾತ್ರ ಬಿಸಿಸಿಐ ಹೊರಬೇಕಾಗಿದೆ. ಕಾರಣ ವರ್ಷಕ್ಕೆ ಒಂದು ಟೂರ್ನಿಯನ್ನ ಆಯೋಜಿಸುತ್ತಿದೆ. ಆದರೆ ಹೀಗಾಗಬಾರದು. ಮಹಿಳಾ ಕ್ರಿಕೆಟ್ ಮತ್ತೆ ಮಾಯವಾಗಬಾರದು, ಬಿಸಿಸಿಐ ಹೆಚ್ಚೆಚ್ಚು ಸರಣಿಗಳನ್ನ ಆಯೋಜಿಸಲಿ ಎಂಬುದು ಎಲ್ಲರ ಆಸೆ.
