ಇನ್ನು 50 ಲಕ್ಷ ಮೂಲ ಬೆಲೆಗೆ ಚಮೀರ ಅವರನ್ನು ರಾಜಸ್ಥಾನ ಖರೀದಿಸಿತ್ತು. ಈಗಾಗಲೇ ಕಗೀಸೋ ರಬಾಡ, ಮಿಚೆಲ್ ಸ್ಟಾರ್ಕ್, ಕೇದಾರ್ ಜಾದವ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ನವದೆಹಲಿ(ಏ.11): ಐಪಿಎಲ್ ಆರಂಭವಾಗಿ ವಾರ ಕಳೆಯುವುದರೊಳಗೆ ಗಾಯಗೊಂಡು ಟೂರ್ನಿಯಿಂದ ಹೊರಬೀಳುತ್ತಿರುವ ಆಟಗಾರರ ಪಟ್ಟಿ ದೊಡ್ಡದಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಆ ಪಟ್ಟಿಗೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಮತ್ತು ಶ್ರೀಲಂಕಾದ ಯುವ ವೇಗದ ಬೌಲರ್ ದುಷ್ಮಾಂತ ಚಮೀರ ಸೇರ್ಪಡೆಯಾಗಿದ್ದಾರೆ. ₹ 5.4 ಕೋಟಿಗೆ ಪ್ಯಾಟ್ ಕಮಿನ್ಸ್‌'ರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಕಮಿನ್ಸ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಕಳೆದ ವರ್ಷ ಸತತ 13 ಟೆಸ್ಟ್ ಪಂದ್ಯಗಳನ್ನಾಡಿದ್ದ ಕಮಿನ್ಸ್ ಇದೀಗ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ

ಇನ್ನು 50 ಲಕ್ಷ ಮೂಲ ಬೆಲೆಗೆ ಚಮೀರ ಅವರನ್ನು ರಾಜಸ್ಥಾನ ಖರೀದಿಸಿತ್ತು. ಈಗಾಗಲೇ ಕಗೀಸೋ ರಬಾಡ, ಮಿಚೆಲ್ ಸ್ಟಾರ್ಕ್, ಕೇದಾರ್ ಜಾದವ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.