ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸ್ಟಾರ್ಕ್‌ಗೆ ವಿಶ್ರಾಂತಿ ನೀಡಲಾಗಿದೆ. ಕಮಿನ್ಸ್ 2011ರಲ್ಲಿ ದಕ್ಷಿಣ ಆಫ್ರಿಕಾ ಎದುರು ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದಾರೆ.
ರಾಂಚಿ(ಮಾ.11): ಇದೇ 16ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಸೀಸ್ ತಂಡದಲ್ಲಿ ಗಾಯಾಳು ಮಿಚೆಲ್ ಸ್ಟಾರ್ಕ್ ಬದಲು, ಮತ್ತೊಬ್ಬ ವೇಗಿ ಪ್ಯಾಟ್ರಿಕ್ ಕಮಿನ್ಸ್ ಸ್ಥಾನ ಪಡೆದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸ್ಟಾರ್ಕ್ಗೆ ವಿಶ್ರಾಂತಿ ನೀಡಲಾಗಿದೆ. ಕಮಿನ್ಸ್ 2011ರಲ್ಲಿ ದಕ್ಷಿಣ ಆಫ್ರಿಕಾ ಎದುರು ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಒಂದು ಪಂದ್ಯದಲ್ಲಿ ಆಡಿದ್ದರೂ 7 ವಿಕೆಟ್ ಪಡೆದಿದ್ದಾರೆ.
ತಾವಾಡಿದ ಮೊದಲ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ 79ರನ್ಗಳಿಗೆ 6 ವಿಕೆಟ್ ಪಡೆದಿದ್ದರು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ 2 ವಿಕೆಟ್ಗಳ ಗೆಲುವು ಪಡೆದಿತ್ತು.
ಸ್ಟಾರ್ಕ್ ವೇಗಿಯಾಗಿರುವುದರಿಂದ ತಂಡವನ್ನು ಸಮತೋಲನ ಮಾಡುವ ದೃಷ್ಠಿಯಿಂದ ಕಮಿನ್ಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೋರ್ ಹಾನ್ಸ್ ಹೇಳಿದ್ದಾರೆ.
