Asianet Suvarna News Asianet Suvarna News

ಹಾಂಕಾಂಗ್ ಓಪನ್: ಪ್ರಧಾನ ಸುತ್ತಿಗೇರಿದ ಕಶ್ಯಪ್

ಇಂದು ನಡೆದ ಅರ್ಹತಾ ಸುತ್ತಿನ ಎರಡು ಪಂದ್ಯಗಳಲ್ಲಿ ಕಶ್ಯಪ್ ಗೆಲುವು ಸಾಧಿಸಿ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

Parupalli Kashyap reaches main draw of Hong Kong Open
  • Facebook
  • Twitter
  • Whatsapp

ಹಾಂಕಾಂಗ್(ನ.21): ಭಾರತದ ಪಿ.ಕಶ್ಯಪ್, ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌'ನಲ್ಲಿ ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇಂದು ನಡೆದ ಅರ್ಹತಾ ಸುತ್ತಿನ ಎರಡು ಪಂದ್ಯಗಳಲ್ಲಿ ಕಶ್ಯಪ್ ಗೆಲುವು ಸಾಧಿಸಿ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಸ್ಥಳೀಯ ಶಟ್ಲರ್ ಲೀ ಚೀಕ್ ವಿರುದ್ಧ 21-13, 21-19 ಗೇಮ್‌'ಗಳಿಂದ ಗೆದ್ದ ಕಶ್ಯಪ್, ಎರಡನೇ ಪಂದ್ಯದಲ್ಲಿ ಚೈನೀಸ್ ತೈಪೆಯ ಕಾನ್ ಚೋ ವಿರುದ್ಧ 21-12, 21-10 ರಿಂದ ಜಯಿಸಿದರು.

ಇನ್ನು ಪುರುಷರ ಡಬಲ್ಸ್‌ನಲ್ಲಿ ಭಾರತದ ಅರ್ಜುನ್ ಮತ್ತು ರಾಮಚಂದ್ರನ್ ಜೋಡಿ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಅರ್ಹತಾ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದೆ.

Follow Us:
Download App:
  • android
  • ios