ಡೆನ್ಮಾರ್ಕ್ ಓಪನ್ ಟೂರ್ನಿಗೆ ತೆರಳಿರುವ ಕಶ್ಯಪ್ ಆಮ್’ಸ್ಟರ್’ಡ್ಯಾಂನಿಂದ ತೆರಳುವಾಗ ಈ ಅವಘಡ ಸಂಭವಿಸಿದ್ದು, ನೆರವಿಗಾಗಿ ಸುಷ್ಮಾ ಸ್ವರಾಜ್, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿ[ಅ.13]: ಭಾರತದ ಸ್ಟಾರ್ ಶಟ್ಲರ್ ಪರುಪಳ್ಳಿ ಕಶ್ಯಪ್ ತಮ್ಮ ಪಾಸ್’ಪೋರ್ಟ್ ಕಳೆದುಕೊಂಡಿದ್ದು, ನೆರವಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್’ನಲ್ಲಿ ಮನವಿ ಮಾಡಿದ್ದಾರೆ.
ಡೆನ್ಮಾರ್ಕ್ ಓಪನ್ ಟೂರ್ನಿಗೆ ತೆರಳಿರುವ ಕಶ್ಯಪ್ ಆಮ್’ಸ್ಟರ್’ಡ್ಯಾಂನಿಂದ ಓಡೆನ್ಸಿಗೆ ತೆರಳುವಾಗ ಈ ಅವಘಡ ಸಂಭವಿಸಿದ್ದು, ನೆರವಿಗಾಗಿ ಸುಷ್ಮಾ ಸ್ವರಾಜ್, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಪಿ. ಕಶ್ಯಪ್ ಹಾಗೂ ಸೈನಾ ನೆಹ್ವಾಲ್ ಇದೇ ಡಿಸೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನು ಮಾಜಿ ನಂ.1 ಆಟಗಾರ್ತಿ ಸೈನಾ ಕೂಡಾ ಖಚಿತ ಪಡಿಸಿದ್ದರು. 2005ರಿಂದಲೂ ಸೈನಾ ಹಾಗೂ ಕಶ್ಯಪ್ ಜೋಡಿ ಪುಲ್ಲೇಲ ಗೋಪಿಚಂದ್ ಗರಡಿಯಲ್ಲಿ ತರಭೇತಿ ಪಡೆಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಈ ಜೋಡಿ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ಇದೀಗ 28 ವರ್ಷದ ಸೈನಾ, 32 ವರ್ಷದ ಕಶ್ಯಪ್ ಅವರನ್ನು ವರಿಸಲಿದ್ದಾರೆ.
