Asianet Suvarna News Asianet Suvarna News

ಸಾಹಾ ಸ್ಥಾನ ಕಸಿದು 8 ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾಗೆ ಭರ್ಜರಿ ಎಂಟ್ರಿ ಕೊಟ್ಟ ಪಾರ್ಥಿವ್ ಪಟೇಲ್

ಎಂಟು ವರ್ಷಗಳ ನಂತರ ಫಾರ್ಥಿವ್ ಪಟೇಲ್​ ಭಾರತ ಟೆಸ್ಟ್ ತಂಡದಲ್ಲಿ ಆಡಲಿದ್ದಾರೆ. ವಿಕೆಟ್​ ಕೀಪರ್​ ವೃದ್ಧಿಮಾನ್​ ಸಹಾ ಗಾಯದಿಂದ ಹೊರಗುಳಿದಿರುವ ಹಿನ್ನಲೆ ಪಟೇಲ್​ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು. ಮೊಹಾಲಿ ಟೆಸ್ಟ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

Parthiv Patel Back To Team India After 8 Years

ನವದೆಹಲಿ(ನ.23): ಎಂಟು ವರ್ಷಗಳ ನಂತರ ಫಾರ್ಥಿವ್ ಪಟೇಲ್​ ಭಾರತ ಟೆಸ್ಟ್ ತಂಡದಲ್ಲಿ ಆಡಲಿದ್ದಾರೆ. ವಿಕೆಟ್​ ಕೀಪರ್​ ವೃದ್ಧಿಮಾನ್​ ಸಹಾ ಗಾಯದಿಂದ ಹೊರಗುಳಿದಿರುವ ಹಿನ್ನಲೆ ಪಟೇಲ್​ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು. ಮೊಹಾಲಿ ಟೆಸ್ಟ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

ಭಾರತ ತಂಡದ ಅತಿಥಿ ಆಟಗಾರ ಫಾರ್ಥಿವ್​: ಜರ್ನಿಮ್ಯಾನ್ ಪಾರ್ಥಿವ್​ ಪಟೇಲ್​

ಪಾರ್ಥಿವ್​ ಪಟೇಲ್​ ಕಳೆದ 15 ವರ್ಷಗಳ ಹಿಂದೇ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ್ರು. ಇಷ್ಟಾದ್ರು ಅವರು ಭಾರತಕ್ಕಾಗಿ ಆಡಿದ್ದಕ್ಕಿಂತ ಬೆಂಚ್​​ ಕಾಯ್ದಿದ್ದು  ಜಾಸ್ತಿ. ಪಾರ್ಥಿವ್​ ಭಾರತ ತಂಡದಲ್ಲಿದ್ದದ್ರು ಅವರಿಗೆ ಸಿಕ್ಕ ಅವಕಾಶ ತುಂಬಾ ಕಮ್ಮಿ 5 ವರ್ಷಗಳ ನಂತರ ಭಾರತ ತಂಡದಲ್ಲಿ ಮತ್ತೇ ಸ್ಥಾನ ಪಡೆದಿರುವ ಅವರು. ಮೊಹಾಲಿ ಟೆಸ್ಟ್​ನಲ್ಲಿ ತಮ್ಮ ಲಕ್​​​ ಚೆಕ್​ ಮಾಡಲಿದ್ದಾರೆ.

ಸಹಾ ಬದಲಿಗೆ ಪಾರ್ಥಿವ್'​ಗೆ ಸ್ಥಾನ

ವೃದ್ಧಿಮಾನ್ ಸಹಾ ಎಡ ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿರುವ ಹಿನ್ನಲೆ  ಪಾರ್ಥಿವ್​  ಪಟೇಲ್​ರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಮಂಗಳವಾರದಂದು ತಂಡ ಪ್ರಕಟಿಸಲಾಗಿತ್ತು. ಆದರೆ, ವೃದ್ಧಿಮಾನ್ ಸಹಾ ಅವರು ಗಾಯಗೊಂಡಿದ್ದು, ಚೇತರಿಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ಮೊಹಾಲಿ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.

ಎರಡನೇ ಟೆಸ್ಟ್​ನಲ್ಲಿ ಸಹಾಗೆ ಗಾಯ

ಎರಡನೇ ಟೆಸ್ಟ್ ಪಂದ್ಯದ ವೇಳೆ ಸಹಾ ಅವರು ಎಡ ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಒಂದು ಪಂದ್ಯಕ್ಕೆ ಪಾರ್ಥೀವ್ ಅವರನ್ನು ಕರೆ ತರಲಾಗಿದೆ. ಸಹಾ ಅವರು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.

ಅದೃಷ್ಟ ವಂಚಿತ ಪಾರ್ಥಿವ್ ಪಟೇಲ್​

2002ರಲ್ಲಿ ಪಾರ್ಥಿವ್​ ಪಟೇಲ್​ ಟೀಮ್ ಇಂಡಿಯಾಗೆ ಪ್ರವೇಶ ಪಡೆದ್ರು. 17ನೇ ವಯಸ್ಸಿನಲ್ಲಿ ಇಂಗ್ಲೆಂಡ್​ ವಿರುದ್ಧವೆ ಚೊಚ್ಚಲ ಪಂದ್ಯವಾಡಿದ ಪಾರ್ಥಿವ್​ ಕಳೆದ ಹದಿನೈದು ವರ್ಷದಲ್ಲಿ  ಅವರಾಡಿರುವುದು ಕೇವಲ 20 ಟೆಸ್ಟ್ ಮಾತ್ರ. ಧೋನಿ ಭಾರತದ ನಾಯಕನ್ನಾಗಿದ್ದರಿಂದ ಪಾರ್ಥಿವ್​ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ್ರು. ಐಪಿಎಲ್​ ದೇಸಿ ಕ್ರಿಕೆಟ್​ನಲ್ಲಿ ಪಟೇಲ್​ ಮಿಂಚಿದ್ರು. ಧೋನಿ ಭಾರತದ ಖಾಯಂ ಸದಸ್ಯನ್ನಾಗಿದ್ದರಿಂದ ಪಾರ್ಥಿವ್​​ ಅವಕಾಶ ವಂಚಿತರಾದ್ರು. ಧೋನಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಮೇಲೆ, ಉತ್ತಮ ಫಾರ್ಮ್​ನಲ್ಲಿದ್ದ ಸಹಾ ಅವರು ಟೀಂ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಂಡಿದ್ದರು. ಈಗ ಸಹಾ ಗಾಯಳಯವಾಗಿರುವುದರಿಂದ ಪಾರ್ಥಿವ್​ 8 ವರ್ಷಗಳ ನಂತರ ಟೆಸ್ಟ್​ ತಂಡದಲ್ಲಿ ಆಡಲಿದ್ದಾರೆ.

ಅನುಭವಕ್ಕೆ ಮಣೆ ಹಾಕಿದ ಬೋರ್ಡ್

ಪ್ರಸಕ್ತ ವರ್ಷ ರಣಜಿ ಟ್ರೋಫಿಯಲ್ಲಿ ರಿಶಾಬ್ ಪಂತ್​ ಉತ್ತಮ ಆಟದಿಂದ ಗಮನಸೆಳೆದಿದ್ರು. ಮತ್ತೊಂದೆಡೆ ದಿನೇಶ್​ ಕಾರ್ತಿಕ್​ ಕೂಡ ಉತ್ತಮ ಪ್ರದರ್ಶನದಿಂದ ಮಿಂಚಿದ್ದಾರೆ. ಆದರೆ ಆಯ್ಕೆಗಾರರು ಮಾತ್ರ

ಮೊಹಾಲಿಯಲ್ಲಿ ನಡೆಯುತ್ತ ಪಾರ್ಥಿವ್​ ಆಟ

31 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್​ಮನ್ ವಿಕೆಟ್ ಕೀಪರ್ ಪಾರ್ಥಿವ್​ ಪಟೇಲ್  ಭಾರತದ ಪರ 2008ರಲ್ಲಿ ಶ್ರೀಲಂಕಾ ವಿರುದ್ಧ ಕೊನೆ ಟೆಸ್ಟ್ ಪಂದ್ಯವಾಡಿದ್ದರು. ನಂತರ ಗುಜರಾತಿನ ವಿಕೆಟ್ ಕೀಪರ್​ಗೆ ಟೀಂ ಇಂಡಿಯಾ ಸೇರಲು ಆಗಿರಲಿಲ್ಲ. ಇಲ್ಲಿ ತನಕ 20 ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ವಿಕೆಟ್ ಹಿಂದೆ ನಿಂತಿದ್ದಾರೆ. ಆದರೆ ಎಂದಿಗೂ ಅವರು ಭಾರತ ತಂಡದ ಖಾಯಂ ಸದಸ್ಯನ್ನಾಗಲು ಸಾಧ್ಯವಾಗಿಲ್ಲ. ಮೊಹಾಲಿ ಟೆಸ್ಟ್ ಪಾರ್ಥಿವ್​ ಹಣೆಬರಹ ಬದಲಿಸುತ್ತಾ ಅಥವಾ ಅವರು ಭಾರತ ತಂಡದ ಅತಿಥಿ ಆಟಗಾರನ್ನಾಗಿ ಮುಂದುವರೆಯುತ್ತಾರೆ ಎಂಬುದಕ್ಕೆ ಮೊಹಾಲಿ ಟೆಸ್ಟ್​ ಉತ್ತರ ನೀಡಲಿದೆ.

Follow Us:
Download App:
  • android
  • ios