ಗುರ್ಗಾಂವ್ (ಅ.06): ಪ್ಯಾರಾ ಒಲಂಪಿಕ್ ಪದಕ ವಿಜೇತೆ ದೀಪಾ ಮಲಿಕ್ ಗೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿಸ್ತಾರ ಏರ್ ಲೈನ್ಸ್ ಕ್ಷಮೆ ಕೇಳಿದೆ.
ದೀಪಾ ಮುಂಬೈಯಿಂದ ದೆಹಲಿಗೆ ವಿಸ್ತಾರಾ ವಿಮಾನದಲ್ಲಿ ಪ್ರಯಾಣ ಮಾಡುವಾಗ ವಿಮಾನದಲ್ಲಿ ತಡಮಾಡಿರುವುದಾಗಿ ಹಾಗೂ ಸಿಬ್ಬಂದಿಯವರು ತಮ್ಮ ಗಾಲಿಕುರ್ಚಿಯನ್ನು ಕೆಟ್ಟದಾಗಿ ನಿರ್ವಹಿಸಿರುವುದಕ್ಕೆ ದೀಪಾ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ಲೈನ್ಸ್ ಸಂಸ್ಥೆ ಕ್ಷಮಿಸಿ, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
