ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡಲು ಅವಕಾಶಗಿಟ್ಟಿಸಿಕೊಂಡಿದ್ದ ಪಾಂಡೆ, 42 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ ಅಜೇಯ 50 ರನ್ ಬಾರಿಸಿದ್ದರು.

ಕೊಲಂಬೊ(ಸೆ.01): ಶ್ರೀಲಂಕಾ ವಿರುದ್ಧ 4ನೇ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ ಮನೀಶ್ ಪಾಂಡೆ ತಂಡದಲ್ಲಿ ಖಾಯಂ ಸ್ಥಾನಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಮಧ್ಯಮ ಕ್ರಮಾಂಕದಲ್ಲಿ ನಾನು ಬ್ಯಾಟ್ ಮಾಡುತ್ತೇನೆ. ತಂಡ ಈ ವರೆಗೂ ವಿವಿಧ ಜವಾಬ್ದಾರಿಗಳನ್ನು ನೀಡಿದೆ. ಯಾವುದೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕರೂ ನಾನು ಸಿದ್ಧವಿರಬೇಕು. ಅವಕಾಶ ಸಿಕ್ಕಾಗ ರನ್ ಗಳಿಸಿ, ತಂಡದಲ್ಲಿ ಖಾಯಂ ಸ್ಥಾನ ಪಡೆಯುವುದು ನನ್ನ ಗುರಿ’ ಎಂದು ಪಾಂಡೆ ಹೇಳಿದ್ದಾರೆ.

‘ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಬೇಕು, ಹಾಗೇ ಪಂದ್ಯದಿಂದ ಪಂದ್ಯಕ್ಕೆ ಆಟದ ಗುಣಮಟ್ಟ ಸಹ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ನಾನು ಗುರಿ ಮುಟ್ಟಲು ಸಾಧ್ಯ’ ಎಂದು ಪಾಂಡೆ ಹೇಳಿದ್ದಾರೆ.

ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡಲು ಅವಕಾಶಗಿಟ್ಟಿಸಿಕೊಂಡಿದ್ದ ಪಾಂಡೆ, 42 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ ಅಜೇಯ 50 ರನ್ ಬಾರಿಸಿದ್ದರು.