ಬೆಂಗಳೂರು(ಸೆ.29): ವಿಜಯ್ ಹಜಾರೆ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಲಿನ ಸುಳಿಗೆ ಸಿಲುಕಿದೆ. 4 ಪಂದ್ಯಗಳಲ್ಲಿ 3 ಸೋಲು ಹಾಗೂ ಇನ್ನೊಂದು ಪಂದ್ಯ ರದ್ದಾಗಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಕಳಪೆ ಪ್ರದರ್ಶನದಿಂದ ಮಹತ್ತರ ಬದಲಾವಣೆ ಮಾಡಲಾಗಿದೆ.

ಕರ್ನಾಟಕ ತಂಡದಲ್ಲಿ ವಿನಯ್ ಕುಮಾರ್ ನಾಯಕತ್ವ ಅಂತ್ಯವಾಗಿದೆ. ಇನ್ನುಳಿದ ವಿಜಯ್ ಹಜಾರೆ ಪಂದ್ಯದಲ್ಲಿ ಕರ್ನಾಟಕ ತಂಡವನ್ನ ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. 

ನಾಯಕತ್ವದಿಂದ ವಿನಯ್‌ಗೆ ಕೊಕ್ ನೀಡಿದರೆ, ಆಲ್ರೌಂಡರ್ ಸ್ಟುವರ್ಟ್ ಬಿನ್ನಿ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿಎಂ ಗೌತಮ್ ತಂಡದಿಂದ ಕೈಬಿಡಲಾಗಿದೆ. ಈ ಮೂಲಕ ಕರ್ನಾಟಕ ಆಯ್ಕೆ ಸಮಿತಿ ಸದಸ್ಯರಾದ ರಘುರಾಮ್ ಭಟ್ ಹಾಗೂ ಫಝಾಲ್ ಖಲೀಲ್  ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ.

ನೂತನ ಕರ್ನಾಟಕ ತಂಡ:
ಮನೀಶ್ ಪಾಂಡೆ(ನಾಯಕ),ವಿನಯ್ ಕುಮಾರ್, ಆರ್ ಸಮರ್ಥ್, ಅನಿರುದ್ ಜೋಶಿ, ಪವನ್ ದೇಶಪಾಂಡೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಕೊನೈನ ಅಬ್ಬಾಸ್, ಜೆ ಸುಚಿತ್, ಅಭಿಷೇಕ್ ರೆಡ್ಡಿ, ಟಿ ಪ್ರದೀಪ್, ಎಂ.ಜಿ ನವೀನ್, ಬಿ.ಆರ್ ಶರತ್, ಶರತ್ ಶ್ರೀನಿವಾಸ್