ದುಬೈ(ಸೆ.16): ಪಾಕಿಸ್ತಾನದಲ್ಲಿ ಸರಣಿ ಆಯೋಜಿಸಲು ಹಲವು ಅಡೆ ತಡೆ ಎದುರಿಸುತ್ತಿರುವ ಪಾಕಿಸ್ತಾನ, ಕಾಡಿ ಬೇಡಿ ಶ್ರೀಲಂಕಾ ತಂಡವನ್ನು ಒಪ್ಪಿಸಿದೆ. ಲಂಕಾದ ಹಿರಿಯ ಕ್ರಿಕೆಟಿಗರು ಬಹಿಷ್ಕಾರ ಹಾಕಿದ ಬೆನ್ನಲ್ಲೇ, ಪ್ರವಾಸಕ್ಕೆ ತಯಾರಿರುವ ಕ್ರಿಕೆಟಿಗರನ್ನು ಒಪ್ಪಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಎಲ್ಲವೂ ಸರಿಹೋಯ್ತು ಅನ್ನುವಷ್ಟರಲ್ಲಿ ಇದೀಗ ಐಸಿಸಿ ಮಧ್ಯಪ್ರವೇಶಿಸಿದೆ. 

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

ಪಾಕಿಸ್ತಾನ-ಶ್ರೀಲಂಕಾ ನಡುವಿನ ಸರಣಿಗೆ ಪಿಸಿಬಿ(ಪಾಕ್ ಕ್ರಿಕೆಟ್ ಮಂಡಳಿ) ಸಕಲ ತಯಾರಿ ಮಾಡಿಕೊಂಡಿದೆ. ಗರಿಷ್ಠ ಭದ್ರತೆಗೆ ನೀಡುವುದಾಗಿ ಹೇಳಿದೆ. ಇದೀಗ ಐಸಿಸಿ ಭದ್ರತಾ ಪರಿಶೀಲನೆ ನಡೆಸಿದ ಬಳಿಕವಷ್ಟೇ ಗ್ರೀನ್ ಸಿಗ್ನಲ್ ನೀಡಲಿದೆ. ಸುರಕ್ಷತಾ ವಿಚಾರದಲ್ಲಿ ಐಸಿಸಿ ರಾಜಿಯಾಗುವುದಿಲ್ಲ. ಹೀಗಾಗಿ ಪಾಕಿಸ್ತಾನದ ಭದ್ರತೆ ಕುರಿತು ತೃಪ್ತಿಯಾದಲ್ಲಿ ಸರಣಿಗೆ ಅವಕಾಶ ನೀಡಲಿದ್ದೇವೆ ಎಂದು ಐಸಿಸಿ ಹೇಳಿದೆ.

ಇದನ್ನೂ ಓದಿ: ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್ ಸಚಿವನಿಗೆ ಲಂಕಾ ಚಾಟಿ!

ಪಾಕಿಸ್ತಾನ ಹಾಗೂ ಶ್ರೀಲಂಕಾ 3 ಏಕದಿನ ಹಾಗೂ 3 ಟಿ20 ಪಂದ್ಯ ಆಡಲಿದೆ.   ಸೆಪ್ಟೆಂಬರ್ 27 ರಿಂದ ಆಕ್ಟೋಬರ್ 9 ವರೆಗೆ ಸರಣಿ ನಡೆಯಲಿದೆ. ಕರಾಚಿ ಹಾಗೂ ಲಾಹೋರ್‌ನಲ್ಲಿ ಎಲ್ಲಾ ಪಂದ್ಯ ಆಯೋಜಿಸಲಾಗಿದೆ.