ಕರಾಚಿ(ಡಿ.12): ವಿಶ್ವ ಕ್ರಿಕೆಟ್‌ಗೆ ಭಾರತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನ ನೀಡಿದ್ದರೆ, ಪಾಕಿಸ್ತಾನ ವೇಗಿಗಳನ್ನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಪಾಕಿಸ್ತಾನ ಯುವ ಪ್ರತಿಭೆಯ ಸ್ವಿಂಗ್ ಬೌಲಿಂಗ್‌ ಎಲ್ಲರಲ್ಲೂ ಅಚ್ಚರಿ ತಂದಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: ದಾಖಲೆ ಬರೀತಾರ ಈ ಐವರು ಕ್ರಿಕೆಟಿಗರು?

ಕರಾಚಿಯ ದೇಸಿ ಟೂರ್ನಿಯಲ್ಲಿ ಆಡುತ್ತಿರುವ ಯುವ ವೇಗಿ ಆಮಿರ್ ಬ್ರೊಹಿ ಸ್ವಿಂಗ್ ಬೌಲಿಂಗ್ ಬ್ಯಾಟ್ಸ್‌ಮನ್‌ಗಳನ್ನ ತಬ್ಬಿಬ್ಬು ಮಾಡುತ್ತಿದ್ದರೆ, ವೀಕ್ಷಕರಿಗೆ ಶಾಕ್ ನೀಡುತ್ತಿದೆ. ಸ್ವಿಂಗ್ ಮಾಸ್ಟರ್ ಪಾಕಿಸ್ತಾನ ಮಾಜಿ ನಾಯಕ ವಾಸಿಮ್ ಅಕ್ರಮ್ ಸ್ವಿಂಗ್ ಮೀರಿಸುವಂತಿದೆ ಈತನ ಬೌಲಿಂಗ್.

ಆಮೀರ್ ಬ್ರೊಹಿ ಅತ್ಯುತ್ತಮ ಸ್ವಿಂಗ್ ಬೌಲಿಂಗ್ ಮಾಡುತ್ತಿದ್ದಾನೆ. ಆದರೆ ಮೊನಚಿಲ್ಲ. ಸೂಕ್ತ ತರಬೇತಿ ಲಭಿಸಿದರೆ ಈತ ಭವಿಷ್ಯದ ಅತ್ಯುತ್ತಮ ಸ್ವಿಂಗ್ ವೇಗಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: ಡೆಲ್ಲಿ ,ಕೆಕೆಆರ್ ಬಳಿಕ ಹೊಸ ತಂಡದತ್ತ ಗೌತಮ್ ಗಂಭೀರ್?