ನವದೆಹಲಿ(ಡಿ.12): ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಗೌತಮ್ ಗಂಭೀರ್ ಇದೀಗ ಐಪಿಎಲ್ ಟೂರ್ನಿಯತ್ತ ಚಿತ್ತ ನೆಟ್ಟಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕನಾಗಿ ಪಯಣ ಆರಂಭಿಸಿದ ಗಂಭೀರ್ ಕೊನೆಗೆ ತಂಡದಿಂದಲೇ ಹೊರಗುಳಿದರು. ಇದೀಗ ಹೊಸ ತಂಡದತ್ತ ಗಂಭೀರ್ ಮುಖ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕಾಗಿ ಯಶಸ್ಸು ಸಾಧಿಸಿದ್ದ ಗಂಭೀರ್‌ಗೆ, 2018ರಲ್ಲಿ ಡೆಲ್ಲಿ ತಂಡ ಕೈ ಹಿಡಿಯಲಿಲ್ಲ. ಹೀಗಾಗಿ ನಾಯಕಸ್ಥಾನ ಕಳೆದುಕೊಂಡ ಬೆನ್ನಲ್ಲೇ ತಂಡದಲ್ಲಿ ಸ್ಥಾನ ಉಳಿಯಲಿಲ್ಲ. ಇದೀಗ 2019ರ ಐಪಿಎಲ್ ಟೂರ್ನಿಗೆ ಗಂಭೀರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿಕೊಳ್ತೋ ಸಾಧ್ಯತೆ ಇದೆ. 

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗಂಭೀರ್ ಯಾವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಅನ್ನೋದು ಸ್ಪಷ್ಟವಾಗಿಲ್ಲ. ಗಂಭೀರ್ ವಿದಾಯ ಹೇಳಿದ ಬೆನ್ನಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ಶುಭ ಹಾರೈಸಿ ಟ್ವೀಟ್ ಮಾಡಿತ್ತು.

 

;

 

ಇದಕ್ಕೆ ಪ್ರತಿಕ್ರಿಯೆ ನೀಡಿದ ಗೌತಮ್ ಗಂಭೀರ್, ಶೀಘ್ರದಲ್ಲೇ ಭೇಟಿಯಾಗುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ. ಇದು ಪಂಜಾಬ್ ತಂಡಕ್ಕೆ ಗಂಭೀರ್ ಸೇರಿಕೊಳ್ಳೋ ಕುರಿತು ಸೂಚನೆ ನೀಡಿದೆ.