ಇಸ್ಲಾಮಾಬಾದ್‌(ಜ.09): ಆಸ್ಪ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ ತಂಡಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಮತ್ತು ಹಾಲಿ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅಭಿನಂದನೆ ತಿಳಿಸಿದ್ದಾರೆ. 

ಇತಿಹಾಸ ಬರೆದ ಭಾರತ ತಂಡಕ್ಕೆ ಬಿಸಿಸಿಐ ಬಂಪರ್‌!

‘ಆಸ್ಪ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದ ಕೊಹ್ಲಿ ಪಡೆಗೆ ಅಭಿನಂದನೆ ತಿಳಿಸಲು ಇಚ್ಛಿಸುತ್ತೇನೆ’ ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಸೇರಿದಂತೆ ಇನ್ನೂ ಅನೇಕ ವಿಶ್ವ ಪ್ರಸಿದ್ಧ ಕ್ರಿಕೆಟಿಗರು ಭಾರತ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ.

ಟೀಂ ಇಂಡಿಯಾ 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದೆ. ಕಾಂಗರೂ ತಂಡವನ್ನು ತವರಿನಲ್ಲೇ 2-1 ಅಂತರದಲ್ಲಿ ಮಣಿಸಿದ ವಿರಾಟ್ ಪಡೆ ಚಾರಿತ್ರಿಕ ಸಾಧನೆ ಮಾಡಿತ್ತು.