ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯಿಂದ ಮಾನ್ಯತೆ ಪಡೆದ ಎಲ್ಲಾ ರಾಷ್ಟ್ರಗಳ ಕ್ರೀಡಾಪಟುಗಳಿಗೆ ವೀಸಾ ಮಂಜೂರು ಮಾಡುವುದಾಗಿ ಭಾರತ ಸರ್ಕಾರ ಲಿಖಿತ ಭರವಸೆ ನೀಡಿದೆ.

ಭಾರತಕ್ಕೆ ಕ್ರೀಡಾತಿಥ್ಯ ಕೈತಪ್ಪುವ ಭೀತಿ!

ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮೂಲಕ ಐಒಸಿಗೆ ಪತ್ರವನ್ನು ತಲುಪಿಸಿದೆ. ಇದರೊಂದಿಗೆ ಪಾಕಿಸ್ತಾನಿ ಕ್ರೀಡಾಪಟುಗಳಿಗೂ ಭಾರತಕ್ಕೆ ಆಗಮಿಸಲು ಅವಕಾಶ ಸಿಗಲಿದೆ. ಎಲ್ಲಾ ರಾಷ್ಟ್ರಗಳಿಗೆ ಪ್ರವೇಶ ನೀಡುವ ವರೆಗೂ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳ ಆತಿಥ್ಯ ಹಕ್ಕು ನೀಡುವುದಿಲ್ಲ ಎಂದು ಐಒಎ ಎಚ್ಚರಿಕೆ ನೀಡಿತ್ತು.

ಗಂಭೀರ್‌ಗೆ ಚಿಕಿತ್ಸೆ ಅಗತ್ಯವಿದೆ, ನಾನೇ ವೀಸಾ ಕೊಡಿಸುವೆ'

ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ್ದಕ್ಕೆ 2 ಒಲಿಂಪಿಕ್ಸ್ ಕೂಟಗಳನ್ನು ಹಿಂಪಡೆಯಲಾಗಿತ್ತು. ಕಿರಿಯರ ಡೇವಿಸ್ ಕಪ್, ಕಿರಿಯರ ಏಷ್ಯನ್ ಕುಸ್ತಿ, ಆರ್ಚರಿ ವಿಶ್ವಕಪ್‌ನ ಮೊದಲ ಹಂತದ ಸ್ಪರ್ಧೆಗಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು. ಮುಂದಿನ ದಿನಗಳಲ್ಲಿ ಭಾರತ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳನ್ನು ಸೇರಿದಂತೆ ಮಹತ್ವದ ಅಂ.ರಾ.ಟೂರ್ನಿಗಳಿಗೆ ಆತಿಥ್ಯ ವಹಿಸುವ ಅವಕಾಶ ಪಡೆಯಲಿದೆ.