2025ರಲ್ಲಿ ಕೊಹ್ಲಿ ಪಾಕ್ ತಂಡದ ಆರಂಭಿಕ; ನೆಟ್ಟಿಗರ ಅತಿರೇಕಕ್ಕೆ ಆಕ್ರೋಶ!
ಭಾರತದ ದಿಟ್ಟ ನಡೆ ಹಾಗೂ ನಿರ್ಧಾರದಿಂದ ಹತಾಶೆಗೊಂಡಿರುವ ಪಾಕಿಸ್ತಾನ ಇದೀಗ ಏನೂ ಮಾಡದ ಸ್ಥಿತಿಯಲ್ಲಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅತಿರೇಕದ ಆಸೆಗಳನ್ನು ಪೂರೈಸುತ್ತಿದ್ದಾರೆ. ಇದೀಗ 2025ರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ತಂಡದ ಆರಂಭಿಕನಾಗಲಿದ್ದಾರೆ ಅನ್ನೋ ವಿಡಿಯೋ ಹರಿಬಿಟ್ಟಿದ್ದಾರೆ.
ನವದೆಹಲಿ(ಸೆ.08): ಭಾರತ ವಿರುದ್ದ ಸದಾ ಕಾಲು ಕೆರೆದು ಬರುವ ಪಾಕಿಸ್ತಾನ ಇದೀಗ ದಿಕ್ಕು ತೋಚದೆ ಕುಳಿತಿದೆ. ಆದರೆ ಪಾಕಿಸ್ತಾನದ ನೆಟ್ಟಿಗರು ಕನಸುಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಅದರಲ್ಲೂ ಜಮ್ಮು ಮತ್ತು ಕಾಶ್ಮೀರದ ಮೇಲಿನ ವಿಶೇಷ ಸ್ಥಾನಮಾನ ರದ್ದಾದ ಬೆನ್ನಲ್ಲೇ ಭಾರತ ವಿರುದ್ದ ನಟ್ಟಿಗರು ಯುದ್ದಸಾರಿದ್ದಾರೆ. ಇದೀಗ 2025ರ ವೇಳೆ ಭಾರತ ಅನ್ನೋ ದೇಶವನ್ನೇ ನಿರ್ನಾಮ ಮಾಡಲಿದೆ ಅನ್ನೋ ವಿಡಿಯೋ ಹರಿಬಿಟ್ಟಿದ್ದು, ಇದರಲ್ಲಿ ಟೀಂ ಇಂಡಿಯಾ ನಾಯಕ ಸೇರಿದಂತೆ ಕೆಲ ಕ್ರಿಕೆಟಿಗರನ್ನು ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ: ಸಿಕ್ಸರ್ ಸಿಡಿಸಿದ್ದ ಕೈ, ಜನ್ರನ್ನು ಕೊಲ್ಲಲು ಸೈ; ಕಾಶ್ಮೀರಕ್ಕಾಗಿ ಮಿಯಾಂದಾದ್ ಕತ್ತಿ ವರಸೆ!
ಪಾಕಿಸ್ತಾನದಲ್ಲಿ ಅತಿರೇಕದಿಂದ ವರ್ತಿಸುವವರ ಸಂಖ್ಯೆ ಹೆಚ್ಚಿದೆ. ಇದೀಗ ಪಾಕ್ ನೆಟ್ಟಿಗರು ಹರಿಬಿಟ್ಟಿರುವ ವಿಡಿಯೋ ಇದಕ್ಕೆ ಸಾಕ್ಷಿ. ಈ ವಿಡಿಯೋ 2025ರ ಪಂದ್ಯದ ವಿಡಿಯೋ ಎಂದು ಕಾಮೆಂಟರಿ ನೀಡಲಾಗಿದೆ. ಈ ವೇಳೆ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದ ಪರ ಆಡಲಿದ್ದಾರೆ. ಶಿಖರ್ ಧವನ್, ಆರ್ ಅಶ್ವಿನ್ ಕೂಡ ಪಾಕಿಸ್ತಾನ ಜರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂದು ಚಿತ್ರಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನ ಪ್ರವಾಸಕ್ಕೆ ಲಂಕಾ ಹಿರಿಯ ಕ್ರಿಕೆಟಿಗರು ಹಿಂದೇಟು; ಅಂತಕದಲ್ಲಿ ಪಿಸಿಬಿ!
ಕಾಮೆಂಟರಿ ಮೂಲಕ ಈ ವಿಡಿಯೋ ಆರಂಭವಾಗುತ್ತೆ. ಬಹುನಿರೀಕ್ಷಿತ 2025ರ ಟಿ20 ವಿಶ್ವಕಪ್ ಫೈನಲ್. ಶ್ರೀನಗರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗುತ್ತಿದೆ. ಪಾಕ್ ಪರ ಬಾಬರ್ ಅಜಮ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ ಎಂದು ವೀಕ್ಷಕ ವಿವರೆ ಆರಂಭಗೊಳ್ಳುತ್ತೆ.
ಈ ಪಂದ್ಯವನ್ನು ನೋಡುತ್ತಿದ್ದ ಪಾಕಿಸ್ತಾನ ಕುಟುಂಬದಲ್ಲಿ ಹುಡುಗಿಯೊಬ್ಬಳು ತನ್ನ ತಂದೆಯ ಬಳಿ ಇಂದು ಕೊಹ್ಲಿ ಪಂದ್ಯ ಗೆಲ್ಲಿಸಿಕೊಡುತ್ತಾನೆ ಎನ್ನುತ್ತಾಳೆ. ಈ ವೇಳೆ ಆಕೆಯ ತಂದೆ, ಕೊಹ್ಲಿ ಹಿಂದೆ ಭಾರತದ ಪರ ಆಡುತ್ತಿದ್ದರು ಎಂದು ಪ್ರತಿಕ್ರಿಯೆ ನೀಡುತ್ತಾರೆ. ತಕ್ಷಣವೇ ಪುತ್ರ ಯಾವ ಭಾರತ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆತನ ತಂದೆ ಮುಗುಳುನಗುವ ವಿಡಿಯೋಗೆ ಭಾರತದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2025ರ ವೇಳೆಗೆ ಭಾರತವೇ ಇಲ್ಲವಾಗಲಿದೆ. ಸಂಪೂರ್ಣ ಪಾಕಿಸ್ತಾನ ಅಸ್ಥಿತ್ವಕ್ಕೆ ಬರಲಿದೆ ಅನ್ನೋ ವಿಡಿಯೋ ಮೂಲಕ ಪಾಕ್ ನೆಟ್ಟಿಗರು ತಮ್ಮ ಅಸಾಧ್ಯ ಕನಸನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಭಾರತದ ನೆಟ್ಟಿಗರು ತಕ್ಕ ಉತ್ತರ ನೀಡಿದ್ದಾರೆ.