ಪಾಕಿಸ್ತಾನ ಮಾಜಿ ವೇಗಿ ಶೋಯಿಬ್ ಅಕ್ತರ್ ಮತ್ತೆ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಟ್ವಿಟರ್ ಮೂಲಕ ಅಕ್ತರ್ ತಮ್ಮ ನಿರ್ಧಾರವನ್ನ ಪ್ರಕಟಿಸಿದ್ದಾರೆ. ಇಲ್ಲಿದೆ ಶೋಯಿಬ್ ಅಕ್ತರ್ ಕಮ್‌ಬ್ಯಾಕ್ ವಿವರ.

ಲಾಹೋರ್(ಫೆ.12): ಪಾಕಿಸ್ತಾನ ಮಾಜಿ ವೇಗಿ ಶೋಯಿಬ್ ಅಕ್ತರ್ ವಿದಾಯದ ಬಳಿಕ ಚಾರಿಟಿ ಪಂದ್ಯ, ಆಲ್ ಸ್ಟಾರ್ ಕ್ರಿಕೆಟ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವೇಗಿ ಮತ್ತೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ ಯುವ ವೇಗಿಗಳಿಗೆ ಚಾಲೆಂಜ್ ಕೂಡ ಹಾಕಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ದಿನಾಂಕ ನಿರ್ಧರಿಸಿದ ಬಳಿಕ ಐಪಿಎಲ್ ವೇಳಾಪಟ್ಟಿ ಪ್ರಕಟ!

ಫಾಸ್ಟ್ ಬೌಲಿಂಗ್ ಹೇಗೆ ಮಾಡುವುದು ಅನ್ನೋದನ್ನ ತೋರಿಸಿಕೊಡುತ್ತೇನೆ. ಇದೇ ಫೆಬ್ರವರಿ 14 ರಂದು ನಾನು ಕ್ರಿಕೆಟ್‌ಗೆ ವಾಪಾಸ್ಸಾಗುತ್ತಿದ್ದೇನೆ ಎಂದು ವಿಡಿಯೋ ಮೂಲಕ ಶೋಯಿಬ್ ಅಕ್ತರ್ ಸಂದೇಶ ರವಾನಿಸಿದ್ದಾರೆ.

Scroll to load tweet…

ಇದನ್ನೂ ಓದಿ: ರೋಹಿತ್’ಗೆ ರೆಸ್ಟ್; ಈ ಇಬ್ಬರಿಗೆ ವಿಶ್ವಕಪ್ ಎಂಟ್ರಿ ಕೊಡಲು ಕೊನೆಯ ಚಾನ್ಸ್..?

ವಿಶ್ವದ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆ ಶೋಯಿಬ್ ಅಕ್ತರ್ ಹೆಸರಲ್ಲಿದೆ. ಅಕ್ತರ್ 161.3kph ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ. ಈ ವೇಗವನ್ನ ಯಾರೂ ಕೂಡ ಮುರಿದಿಲ್ಲ. ಇದೀಗ ಟ್ವಿಟರ್ ಮೂಲಕ ಮತ್ತೆ ಚಾಲೆಂಜ್ ಮಾಡಿರುವ ಶೋಯಿಬ್, ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ್ದಾರೆ.