ದುಬೈ(ಸೆ.22): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಆಫ್ಘಾನಿಸ್ತಾನ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕ್ ಗೆಲುವಿಗಿಂತ ಹೆಚ್ಚು ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ವರ್ತನೆಗೆ ಟೀಕೆ ಮಾಡಿದ್ದಾರೆ.

ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಕೆಳಕ್ರಮಾಂಕದಲ್ಲಿ ಮೊಹಮ್ಮದ್ ನವಾಜ್ ಸಿಕ್ಸರ್ ಸಿಡಿಸಿದರು. ಆದರೆ ಮರು ಎಸೆತದಲ್ಲೇ ರಶೀದ್ ಖಾನ್, ನವಾಜ್ ವಿಕೆಟ್ ಕಬಳಿಸಿ ಸಂಭ್ರಮಾಚರಿಸಿದರು. ಆದರೆ ರಶೀದ್ ಸಂಭ್ರಮಾಚರಣೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳನ್ನ ಕೆರಳಿಸಿದೆ.

ಕೈಸನ್ನೆ ಮೂಲಕ ಮೊಹಮ್ಮದ್ ನವಾಜ್‌ಗೆ ರಶೀದ್ ಸೆಂಡ್ ಆಫ್ ನೀಡಿದ್ದರು. ರಶೀದ್ ಖಾನ್ ಈ ವರ್ತನೆಗೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಪಾಕ್ ಅಭಿಮಾನಿಗಳ ಟ್ವೀಟ್.