ಡರ್ಬನ್(ಜ.27): ಸೌತ್ಆಫ್ರಿಕಾ ಕ್ರಿಕೆಟಿಗ ಆ್ಯಂಡಿಲ್ ಫೆಲುಕ್‌ವಾಯೋ ನಿಂದಿಸಿದ ವಿವಾದ ಸೃಷ್ಟಿಸಿದ ಪಾಕಿಸ್ತಾನ ನಾಯಕ ಸರ್ಫಾರಾಜ್ ಅಹಮ್ಮದ್‌ಗೆ ಅಮಾನತು ಶಿಕ್ಷೆ ನೀಡಲಾಗಿದೆ. 4 ಅಂತಾರಾಷ್ಟ್ರೀಯ ಪಂದ್ಯದಿಂದ ಸರ್ಫಾರಾಜ್ ಅಹಮ್ಮದ್‌ನನ್ನ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಅಮಾನತುಗೊಂಡಿದ್ದ ಪಾಂಡ್ಯ-ರಾಹುಲ್ ನಿರಾಳ!

ಐಸಿಸಿ ನಿಯಮ 7.3 ರ ಪ್ರಕಾರ ಸರ್ಫರಾಜ್ ಅಹಮ್ಮದ್ ಕ್ರಿಕಿಟಿಗನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ.  ಹೀಗಾಗಿ ಅಮಾನತು ಮಾಡಲಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ ಸರ್ಫಾರಾಜ್ ಖಾನ್‌ಗೆ ಪಾಕಿಸ್ತಾನ ಕ್ರಿಕೆಟಿಗ ಮಂಡಳಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಐಸಿಸಿ ಹೇಳಿದೆ.

 

 

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಹಾಗೂ ತಾಯಿಯನ್ನ ನಿಂದಿಸಿದ ಪಾಕ್ ನಾಯಕ!

ಸೌತ್ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕ್ರಿಕೆಟಿಗ ಹಾಗೂ ಆತನ ತಾಯಿಯನ್ನ ನಿಂದಿಸಿರುವ ಸರ್ಫಾರಾಜ್ ಅಹಮ್ಮದ್ ಹೇಳಿಕೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು. ಹೇ ಕಪ್ಪು ಹುಡುಗ, ನಿನ್ನ ತಾಯಿ ಎಲ್ಲಿ ಕುಳಿತಿದ್ದಾರೆ? ಎಲ್ಲಿ ಪ್ರಾರ್ಥನೆ ಮಾಡಲು ಹೇಳಿದ್ದಿ? ಎಂದು ಸರ್ಫರಾಜ್ ಹೇಳಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಟೀಕೆಗಳು ಕೇಳಿ ಬರುತ್ತಿದ್ದಂತೆ, ಸರ್ಫಾರಾಜ್ ಭೇಷರತ್ ಕ್ಷಮೆ ಯಾಚಿಸಿದ್ದರು.