ನವದೆಹಲಿ(ಜ.25): ಕಾಫಿ ವಿತ್ ಕರಣ್ ಟೀವಿ ಶೋನಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕೆ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ವಿಧಿಸಲಾಗಿದ್ದ ಅಮಾನತು ಶಿಙೆಯನ್ನು ತಕ್ಷಣದಿಂದ  ಜಾರಿಗೆ ಬರುವಂತೆ ಬಿಸಿಸಿಐನ ಆಡಳಿತ ಸಮಿತಿ(COA)ವಾಪಸ್ ಪಡೆದಿದೆ.

ಇದನ್ನೂ ಓದಿ: ’ಕಾಫಿ ವಿತ್ ಕರುಣ್’: ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ ಕರುಣ್ ಹೇಳಿದ್ದೇನು?

ನೂತನ ಅಮಿಕಸ್ ಕ್ಯೂರಿ ಪಿ.ಎಸ್.ನರಸಿಂಗ ಅವರೊಂದಿಗೆ ಗುರುವಾಗ ಚರ್ಚಿಸಿದ ಬಿಸಿಸಿಐ ಆಡಳಿತ ಸಮಿತಿ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ, ಅಮಾನತು ಶಿಕ್ಷೆಯನ್ನ ಹಿಂಪೆಡೆಯುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದಂತೆ ಇಬ್ಬರ ವಿರುದ್ಧ ಜ.11 ರಂದು ಹೇರಿದ್ದ ಅಮಾನತು, ವಿಚಾರಣೆ ಪೂರ್ಣಗೊಳ್ಳುವ ವರೆಗೂ ಹಿಂಪಡೆಯಲಾಗುವುದು ಎಂದು ಸಮಿತಿ ಹೇಳಿದೆ. 

ಇದನ್ನೂ ಓದಿ: ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್‌, ರಾಹುಲ್‌?

ರಾಹುಲ್ ಮತ್ತು ಪಾಂಜ್ಯ, ತಮ್ಮ ಮೇಲಿನ ಅಮಾನತು ಹಿಂಪಡೆದಿರುವುದರಿಂದ  ನಿರಾಳರಾಗಿದ್ದಾರೆ. ಅಲ್ಲದೆ ಆಲ್ರೌಂಡರ್ ಹಾರ್ದಿಕ್, ಕಿವೀಸ್ ಪ್ರವಾಸದಲ್ಲಿರುವ ಭಾರತ ತಂಡವನ್ನೂ ಸೇರಿಕೊಳ್ಳೋ ವಿಶ್ವಾಸದಲ್ಲಿದ್ದಾರೆ.