ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸ್ಟಾರ್ ಬ್ಯಾಟ್ಸಮನ್ ಪುತ್ರಿ ಇಹಲೋಕ ತ್ಯಜಿಸಿದ್ದಾಳೆ. 2 ವರ್ಷದ ಮುದ್ದಾದ ಪುತ್ರಿಯನ್ನು ಕಳೆದುಕೊಂಡ ಕ್ರಿಕೆಟಿಗ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಲಂಡನ್(ಮೇ.20): ಕ್ಯಾನ್ಸರ್ ಮಾರಕ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನ ಬ್ಯಾಟ್ಸ್‌ಮನ್ ಆಸಿಫ್ ಆಲಿ ಪುತ್ರಿ ಸಾವನ್ನಪ್ಪಿದ್ದಾಳೆ. ಲಂಡನ್‌ನಲ್ಲಿ ಹೆಚ್ಚಿನ ಚಿಕ್ಸಿತೆ ಪಡೆಯುತ್ತಿದ್ದ 2 ವರ್ಷದ ಆಸಿಫ್ ಆಲಿ ಪುತ್ರಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು ಎಳೆದಿದ್ದಾಳೆ. ಆಲಿ ಪುತ್ರಿ ಸಾವಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಪಾಕ್ ಸೂಪರ್ ಲೀಗ್ ಫ್ರಾಂಚೈಸಿ ಇಸ್ಲಾಮಾಬಾದ್ ಯುನೈಟೆಡ್ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ದಿಗ್ಗಜರಿಗೆ ಕಾದಿದೆ ಶಾಕ್-2019ರ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್?
ಆಸಿಫ್ ಆಲಿ ಪುತ್ರಿ ಕಳೆದ 6 ತಿಂಗಳಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಲಿ ಪುತ್ರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ವರ್ಗಾಯಿಸಲಾಗಿತ್ತು. ಆದರೆ ಕ್ಯಾನ್ಸ್ 4ನೇ ಸ್ಟೇಜ್ ದಾಟಿದ ಕಾರಣ ಚಿಕ್ಸೆತ ಫಲಕಾರಿಯಾಗಿಲ್ಲ. ಹೀಗಾಗಿ ಆಸಿಫ್ ಆಲಿ ಮುದ್ದಾದ ಮಗಳನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 2019 ವಿಶ್ವಕಪ್ ಪ್ರಶಸ್ತಿ ಯಾರಿಗೆ? - ರಿಕಿ ಪಾಂಟಿಂಗ್ ಭವಿಷ್ಯ!
ಪುತ್ರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, 27 ವರ್ಷದ ಆಸಿಫ್ ಆಲಿ ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿ ಆಡಿದ ಆಸಿಫ್, ವಿಶ್ವಕಪ್ ಪ್ರಾಥಮಿಕ ತಂಡಕ್ಕೆ ಆಯ್ಕೆಯಾಗಿಲ್ಲ. ಆದರೆ ಇತ್ತೀಚೆಗಿನ ಪ್ರದರ್ಶನ ಆಧರಿಸಿ ಆಸಿಫ್ ಆಲಿ ವಿಶ್ವಕಪ್ ಆಯ್ಕೆಯಾಗೋ ಸಾಧ್ಯತೆ ಇದೆ.
