ಸಿಡ್ನಿ(ಮೇ.20): ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು 10 ದಿನ ಬಾಕಿ ಇದೆ. ಎಲ್ಲಾ 10 ತಂಡಗಳ ತಯಾರಿ ಆರಂಭಗೊಂಡಿದೆ. ಇದೀಗ ಈ ಭಾರಿ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿಗ್ಗಜ ಕ್ರಿಕೆಟಿಗರು ನೆಚ್ಚಿನ ತಂಡ ಯಾವುದು ಅನ್ನೋ ಕುರಿತು ಬೆಳಕು ಚೆಲುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗರ ರಿಕಿ ಪಾಂಟಿಂಗ್ ವಿಶ್ವಕಪ್ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಗೆಲ್ಲೋ ತಂಡ ಯಾವುದು- ಗಂಭೀರ್ ಹೇಳಿದ್ರು ಭವಿಷ್ಯ!

2019ರಲ್ಲಿ ಎಲ್ಲಾ ತಂಡಗಳನ್ನು ಅವಲೋಕಿಸಿದರೆ ಇಂಗ್ಲೆಂಡೆ ಹೆಚ್ಚು ಬಲಿಷ್ಠವಾಗಿದೆ. ಹೀಗಾಗಿ ಆತಿಥೇಯ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲಲಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಕಳೆದ 2 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ತವರಿನ ಕಂಡೀಷನ್ ಕೂಡ ನೆರವಾಗಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಪ್ರಶಸ್ತಿ ಮೊತ್ತ ಬಹಿರಂಗ- ಗೆದ್ದ ತಂಡಕ್ಕೆ ಕೋಟಿ ಕೋಟಿ!

ರೌಂಡ್ ರಾಬಿನ್ ಶೈಲಿಯ ಹೋರಾಟ ಇರೋದರಿಂದ ಎಲ್ಲಾ ತಂಡಗಳ ವಿರುದ್ಧ ಹೋರಾಟದಲ್ಲಿ ಇಂಗ್ಲೆಂಡ್‌ಗೆ ಅವಕಾಶಗಳು ಹೆಚ್ಚು. ಎಲ್ಲಾ ತಂಡಗಳನ್ನು ಮಣಿಸುವ ಸಾಮರ್ಥ್ಯ ಇಂಗ್ಲೆಂಡ್‌ಗೆ ಇದೆ. ಇನ್ನು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ಗೆಲುವಿನ ಫೇವರಿಟ್ ಎಂದಿದ್ದಾರೆ. ಇತ್ತ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕಮ್‌ಬ್ಯಾಕ್‌ನಿಂದ ಆಸ್ಟ್ರೇಲಿಯಾ ತಂಡವನ್ನು ಕಡೆಗಣಿಸುವಂತಿಲ್ಲ ಎಂದಿದ್ದಾರೆ.