ಟಾಂಟನ್‌[ಜೂ.12]: ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಲುಕಿ 5 ವರ್ಷ ನಿಷೇಧಕ್ಕೊಳಗಾಗಿದ್ದ ಪಾಕಿಸ್ತಾನದ ವೇಗಿ ಮೊಹಮದ್‌ ಆಮೀರ್‌, 3 ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಾಪಸಾಗಿದ್ದು ಇಂಗ್ಲೆಂಡ್‌ನ ಟಾಂಟನ್‌ನಲ್ಲಿ. ಬುಧವಾರ ಅದೇ ಮೈದಾನದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯವನ್ನಾಡಲಿದ್ದಾರೆ. ಪಾಕಿಸ್ತಾನ ಹಾಗೂ ಆಸ್ಪ್ರೇಲಿಯಾ ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೆ ಇದು ಮಹತ್ವದ ಪಂದ್ಯವೆನಿಸಿದೆ.

ಆಸ್ಪ್ರೇಲಿಯಾ ವಿರುದ್ದ ಕಳೆದ 14 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಕೇವಲ 1ರಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಸಹಜವಾಗಿಯೇ ಸರ್ಫರಾಜ್‌ ಅಹ್ಮದ್‌ ತಂಡ ಒತ್ತಡದಲ್ಲಿದೆ. ಭಾರತ ವಿರುದ್ಧ ಸೋಲು ಅನುಭವಿಸಿದ ಆಸ್ಪ್ರೇಲಿಯಾ ಸಹ ಒತ್ತಡದಲ್ಲಿದ್ದು, ಗಾಯಗೊಂಡಿರುವ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಅನುಪಸ್ಥಿತಿ ಸಹ ಕಾಡಲಿದೆ.

ಭಾರತೀಯ ವೇಗಿಗಳ ವಿರುದ್ಧ ಪರದಾಡಿದ್ದ ಆಸ್ಪ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಪಾಕಿಸ್ತಾನದ ವೇಗಿಗಳಾದ ಆಮೀರ್‌, ವಾಹಬ್‌ ರಿಯಾಜ್‌ರಿಂದ ಕಠಿಣ ಸವಾಲು ಎದುರಾಗಲಿದೆ. ಡೇವಿಡ್‌ ವಾರ್ನರ್‌ ಹಾಗೂ ಸ್ಟೀವ್‌ ಸ್ಮಿತ್‌ ಮೇಲೆ ಆಸ್ಪ್ರೇಲಿಯಾ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಪಾಕಿಸ್ತಾನ 3 ಪಂದ್ಯಗಳಿಂದ 3 ಅಂಕ ಗಳಿಸಿದರೆ, ಆಸ್ಪ್ರೇಲಿಯಾ 3 ಪಂದ್ಯಗಳಿಂದ 4 ಅಂಕ ಪಡೆದಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ವಿಶ್ವಕಪ್‌ನಲ್ಲಿ ಆಸೀಸ್‌ vs ಪಾಕ್‌

ಪಂದ್ಯ: 09

ಆಸ್ಪ್ರೇಲಿಯಾ: 05

ಪಾಕಿಸ್ತಾನ: 04

ಸಂಭವನೀಯ ಆಟಗಾರರ ಪಟ್ಟಿ

ಆಸ್ಪ್ರೇಲಿಯಾ: ಫಿಂಚ್‌(ನಾಯಕ), ವಾರ್ನರ್‌, ಸ್ಮಿತ್‌, ಖವಾಜ, ಮಾಷ್‌ರ್‍, ಮ್ಯಾಕ್ಸ್‌ವೆಲ್‌, ಕಾರ್ರಿ, ಕೌಲ್ಟರ್‌ ನೈಲ್‌, ಕಮಿನ್ಸ್‌, ಬೆರ್ಹೆನ್‌ಡೊಫ್‌ರ್‍, ಸ್ಟಾರ್ಕ್, ಜಂಪಾ.

ಪಾಕಿಸ್ತಾನ: ಫಖರ್‌ ಜಮಾನ್‌, ಇಮಾಮ್‌, ಬಾಬರ್‌, ಹಫೀಜ್‌, ಮಲಿಕ್‌, ಸರ್ಫರಾಜ್‌ (ನಾಯಕ), ಆಸಿಫ್‌ ಅಲಿ, ಶದಾಬ್‌, ಹಸನ್‌ ಅಲಿ, ವಾಹಬ್‌, ಆಮೀರ್‌.

ಸ್ಥಳ: ಟಾಂಟನ್‌, ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್